ಮಂಗಳವಾರ, ಡಿಸೆಂಬರ್ 1, 2020
21 °C

ಡ್ರಗ್ಸ್ ಮಾರಾಟ: ಬೆಂಗಳೂರಿನಲ್ಲಿ ಇಬ್ಬರು ಪೆಡ್ಲರ್‌ಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಮಾರಾಟದಲ್ಲಿ ನಿರತರಾಗಿದ್ದ ಇಬ್ಬರು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾದ ಮಾರ್ಕ್ ಹಾಗೂ ಹೆನ್ರಿ ಬಂಧಿತರು. ಅವರಿಂದ 6 ಮೊಬೈಲ್ ಹಾಗೂ ಪಾಸ್‌ಪೋರ್ಟ್ ಜಪ್ತಿ ಮಾಡಲಾಗಿದೆ.

'ಅಕ್ಟೋಬರ್ 30ರಂದು ನೈಜೀರಿಯಾದ ಪೆಡ್ಲರ್ ಸನ್ನಿ ಎಂಬಾತನನ್ನು ಬಂಧಿಸಲಾಗಿತ್ತು. ಆತನಿಂದ ಕೊಕೇನ್ ಜಪ್ತಿ ಮಾಡಲಾಗಿತ್ತು. ಆತ ನೀಡಿದ್ದ ದೂರು ಆಧರಿಸಿ ಇದೀಗ ಮಾರ್ಕ್ ಹಾಗೂ ಹೆನ್ರಿಯನ್ನು ಸೆರೆ ಹಿಡಿಯಲಾಗಿದೆ' ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

'ಆರೋಪಿಗಳು, ಹಲವು ವರ್ಷಗಳಿಂದ ನಗರದಲ್ಲಿ ಡ್ರಗ್ಸ್  ಮಾರಾಟ ಮಾಡುತ್ತಿದ್ದರು. ಮಾರ್ಕ್ ಬಳಿ ಮಾತ್ರ ಪಾಸ್‌ಪೋರ್ಟ್ ಇದೆ. ಹೆನ್ರಿ ಬಳಿ ಇಲ್ಲ' ಎಂದೂ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು