ಬೆಂಗಳೂರು: ಸಿಗರೇಟ್ ಹಣ ಕೇಳಿದರು ಎಂಬ ಕಾರಣಕ್ಕೆ ರೌಡಿ ಹನೀಫ್ ಎಂಬಾತ ಅಂಗಡಿ ಮಾಲೀಕರಾದ ಮೇಘಲಾ (38) ಎಂಬುವರ ಮೇಲೆ ಕಾದ ಎಣ್ಣೆ ಎರಚಿದ್ದು, ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೃತ್ಯದಿಂದಾಗಿ ಅಮರಜ್ಯೋತಿ ಲೇಔಟ್ ನಿವಾಸಿ ಮೇಘಲಾ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೌಡಿ ಹನೀಫ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಅಮರಜ್ಯೋತಿ ಲೇಔಟ್‌ನಲ್ಲಿ ಮೇಘಲಾ ಅಂಗಡಿ ಇಟ್ಟುಕೊಂಡಿದ್ದಾರೆ. ಸೆ. 30ರಂದು ರಾತ್ರಿ 7.30ರ ಸುಮಾರಿಗೆ ಸಹಚರರ ಜೊತೆ ಅಂಗಡಿಗೆ ಬಂದಿದ್ದ ಹನೀಫ್, ಸಿಗರೇಟ್ ಪಡೆದು ಸೇದಿದ್ದ. ಹಣ ಕೊಟ್ಟಿರಲಿಲ್ಲ. ಅದನ್ನು ಪ್ರಶ್ನಿಸಿದ್ದ ಮಹಿಳೆ, ಹಣ ಕೊಡುವಂತೆ ಕೋರಿದ್ದರು’.

‘ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದಿತ್ತು. ಅಂಗಡಿಯಲ್ಲಿ ಬೊಂಡಾ ಭಜ್ಜಿ ಮಾಡಲು ಕಾಯಿಸಿದ್ದ ಎಣ್ಣೆಯನ್ನೇ ಹನೀಫ್ ಮಹಿಳೆ ಮೇಲೆ ಎರಚಿ ಪರಾರಿಯಾಗಿದ್ದಾನೆ. ಮಹಿಳೆಯ ದೇಹದ ಶೇ 30ರಷ್ಟು ಭಾಗ ಸುಟ್ಟಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.