ಬೆಂಗಳೂರು: ‘ಇಂದು ಸನಾತನದ ಬಗ್ಗೆ ಮಾತನಾಡುತ್ತಿರುವ ವ್ಯಕ್ತಿಗಳು ಧರ್ಮದ ಕುರಿತು ಮಾತನಾಡುತ್ತಿಲ್ಲ. ರಾಜಕಾರಣವನ್ನೇ ಧರ್ಮವೆಂದು ಭಾವಿಸಿ ಮಾತನಾಡುತ್ತಿದ್ದಾರೆ’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.
ನಗರದಲ್ಲಿ ಬಯಲು ಬಳಗ ಆಯೋಜಿಸಿದ್ದ ಸನಾತನ ಮಾತು–ಸಂವಾದದಲ್ಲಿ ಅವರು ಮಾತನಾಡಿದರು.
‘ಸನಾತನಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಸನಾತನದ ಬಗ್ಗೆ ಮಾತನಾಡುತ್ತಿರುವ ವ್ಯಕ್ತಿಗಳು ಹೇಳುತ್ತಾರೆ. ಆದರೆ, ಆ ಇತಿಹಾಸದ ನಿಜವಾದ ಗ್ರಹಿಕೆ ಮತ್ತು ಮಂಡನೆ ಅವರಿಗೆ ಸಾಧ್ಯವೇ ಇಲ್ಲ. ಸನಾತನ ಎಂದರೆ ಪುರಾತನ, ಶಾಶ್ವತ ಎಂದೂ ಅವರು ವಾದಿಸುತ್ತಿದ್ದಾರೆ’ ಎಂದರು.
‘ಸಿಂಧೂ ನಾಗರಿಕತೆ ನಮಗೆ ನಿಜವಾಗಿಯೂ ಪುರಾತನವಾದುದು. ಅಂದಿನ ಕಾಲದಲ್ಲಿ ಹೆಣ್ಣು ದೇವತೆಯ ಆರಾಧನೆ, ಪಶುಪತಿ ಆರಾಧನೆಗಳು ಇದ್ದವು. ಅವು ನಮಗೆ ಗೋಚರ ಆಗುವಂತೆ ಬುಡಕಟ್ಟಿನ ಆರಾಧನೆಗಳಾಗಿದ್ದವು. ಆದರೆ, ಮನುಧರ್ಮಶಾಸ್ತ್ರದ ನಿಯಮಗಳನ್ನು ಮುಖ್ಯವಾಗಿಸಿಕೊಂಡು ಜನಸಮುದಾಯವನ್ನು ನಿಯಂತ್ರಿಸಲು ಸನಾತನಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.
ಕಾರ್ಯಕ್ರಮದಲ್ಲಿ ರವಿಕುಮಾರ್ ಬಾಗಿ, ಡಿ.ಆರ್.ದೇವರಾಜ್, ಚಂದ್ರಕಲಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.