ಈ ಬಗ್ಗೆ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. ‘ಗಣ್ಯರಿಗೆ ಆಮಂತ್ರಣ ನೀಡುವ ಪರಿಪಾಠ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆಮಂತ್ರಣ ನೀಡುವುದು ಸರ್ಕಾರದ ವಿವೇಚನೆಯಾದರೂ, ಸತ್ಸಂಪ್ರದಾಯ ಕೈಬಿಡಬಾರದು. ತಮ್ಮ ಅನನ್ಯ ಸಾಧನೆಗಳ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಿರುವ ಸಾಧಕರನ್ನು ಉಪೇಕ್ಷಿಸುವುದು ಸೂಕ್ತವಲ್ಲ. ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಲೋಕದ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿ, ಸಾಧನೆಗೈದ ಅನೇಕ ಗಣ್ಯರು ರಾಜಧಾನಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಅಂತಹ ಗಣ್ಯರನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು’ ಎಂದು ಮನವಿ ಮಾಡಿದ್ದಾರೆ.