ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ಬಾಕ್ಸ್‌ಗಳನ್ನು ಆಟೊ ಚಾಲಕರಿಗೆ ವಿತರಣೆ ಮಾಡಲಾಯಿತು
‘ರಾಜ್ಯ ಸಾರಿಗೆ ಬಸ್‌ಗಳಲ್ಲಿ ಜಾರಿಗೆ ಬರಲಿ’
ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವಿಮಾನ ಹೊರತುಪಡಿಸಿ ಮತ್ತೆಲ್ಲಿಯೂ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್‌ಗಳಿಲ್ಲ. ಆಟೊ, ಟ್ಯಾಕ್ಸಿ, ಬಸ್, ರೈಲು ಸೇರಿವಿವಿಧ ಸಾರಿಗೆಗಳಲ್ಲಿ ಸಂಚರಿಸುವಾಗ ಮುಟ್ಟಾದರೆ ಮಹಿಳೆ ಏನು ಮಾಡಬೇಕು? ಈ ಪ್ರಶ್ನೆಯೇ ಯೋಜನೆಗೆ ಕಾರಣವಾಯಿತು ಎಂದು ಯೋಜನೆ ರೂವಾರಿ, ಸಕ್ರಿಯ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕಿ ಅನಿತಾ ರಾವ್ ಹೇಳಿದರು.
ಸಾರಿಗೆ ನಿಗಮದ ಬಸ್‌ಗಳಲ್ಲಿ ಇದೇ ಸೌಲಭ್ಯ ಕಲ್ಪಿಸಿದರೆ ಮಹಿಳಾ ಪ್ರಯಾಣಿಕರಿಗೆ ಅನುಕೂಲ. ಪ್ಯಾಡ್ ಮುಗಿದಾಗ ಮತ್ತೆ ತಂದಿಡಲು ಚಾಲಕರು, ನಿರ್ವಾಹಕರು ತಯಾರಾದರಷ್ಟೇ ಯಶಸ್ವಿ ಆಗಲಿದೆ. ಸದ್ಯ ಆಟೊದಲ್ಲಿ ಸ್ಯಾನಿಟರಿ ಪ್ಯಾಡ್ ಇಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.