ಶುಕ್ರವಾರ, ಏಪ್ರಿಲ್ 3, 2020
19 °C
ಮೊಬೈಲ್‌ ಪಕ್ಕಕ್ಕಿಡಿ, ಪುಸ್ತಕ ಕೈಗೆತ್ತಿಕೊಳ್ಳಿ: ನಿರ್ಮಲಾನಂದನಾಥ ಸ್ವಾಮೀಜಿ

ಸಪ್ನ ಬುಕ್‌ ಹೌಸ್‌ನಿಂದ 50 ಕೃತಿಗಳ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇಂದು ಮೊಬೈಲ್‌ನಲ್ಲೇ ಜಗತ್ತನ್ನು ಕಾಣುವುದು ಸಾಧ್ಯವಿದ್ದರೂ, ನಮ್ಮ ಆರೋಗ್ಯ, ಜ್ಞಾನ ಸಂಪಾದನೆಗಾಗಿ ಮೊಬೈಲ್‌ ಬದಿಗಿಟ್ಟು, ಪುಸ್ತಕ ಕೈಗೆತ್ತಿಕೊಳ್ಳುವುದು ಒಳ್ಳೆಯದು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಶನಿವಾರ ಸಪ್ನ ಬುಕ್ ಹೌಸ್‌ನಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಪ್ರಕಟಿಸಲಾದ 50 ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಆಶೀರ್ವದಿಸಿದರು.

‘ಒಂದು ಪುಸ್ತಕ ಬದುಕನ್ನೇ ಬದಲಿಸಬಲ್ಲುದು ಎಂಬುದಕ್ಕೆ ಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ ನಿದರ್ಶನ, ಅವರಿಗೆ 21 ವರ್ಷವಾಗಿದ್ದಾಗ ಸ್ನೇಹಿತರೊಬ್ಬರು ವಿಜ್ಞಾನ ಪುಸ್ತಕವೊಂದನ್ನು ನೀಡಿದ್ದರು. ಅದನ್ನು ಓದಿದ ಐನ್‌ಸ್ಟೀನ್‌ ವಿಜ್ಞಾನದತ್ತ ಪ್ರೇರಣೆಗೊಂಡು ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದರು’ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌, ’ನಾವು ಇಂದು ಕೇವಲ 60–70 ಪದಗಳನ್ನಷ್ಟೇ ಬಳಸುತ್ತಿದ್ದೇವೆ. ರಾಜಕಾರಣಿಗಳನ್ನೂ ಕಣ್ಣು ತೆರೆಸುವಂತಹ ಪುಸ್ತಕಗಳು ಪ್ರಕಟವಾಗಬೇಕು‘ ಎಂದರು.

ಹಿರಿಯ ಸಾಹಿತಿಗಳಾದ ಕಮಲಾ ಹಂಪನಾ, ಹಂ.ಪ.ನಾಗರಾಜಯ್ಯ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ
ಮಾತನಾಡಿ, ಸಪ್ನ ಬುಕ್‌ ಹೌಸ್‌ನ ಕನ್ನಡ ಕಾಳಜಿಯನ್ನು ಕೊಂಡಾಡಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ
ನಿತಿನ್‌ ಶಾ ಇದ್ದರು. 

ಸಿದ್ದಲಿಂಗಯ್ಯ, ಕಮಲಾ ಹಂಪನಾ, ಜೋಗಿ, ಸಿ.ಆರ್.ಚಂದ್ರಶೇಖರ್, ಡುಂಡಿರಾಜ್, ವಸುಂಧರಾ ಭೂಪತಿ, ಟಿ.ಆರ್. ಅನಂತರಾಮು ಸಹಿತ ಹಿರಿ, ಕಿರಿಯ ಲೇಖಕರ ಕೃತಿಗಳಿದ್ದವು. ಬಹುತೇಕ ಲೇಖಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು