ಬೆಂಗಳೂರು: ಗಂಡು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ಹೆಣ್ಣು ಮಕ್ಕಳಿಗೆ ಸಾಮಾನ್ಯ ಶಿಕ್ಷಣ ಕೊಡಿಸುವ ಪೋಷಕರ ಮನೋಭಾವ ಬದಲಾಗಬೇಕು ಎಂದು ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಬಿ. ರಮೇಶ್ ಹೇಳಿದರು.

ಭಾರತದ ಪ್ರಥಮ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆಯವರ ಜನ್ಮದಿನದ ಪ್ರಯುಕ್ತ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ‘ಶಿಕ್ಷಕಿಯರ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಹೆಣ್ಣುಮಕ್ಕಳು ಶೇಕಡ 70ರಷ್ಟು ಇದ್ದಾರೆ. ಆದರೆ, ವೃತ್ತಿಪರ ಶಿಕ್ಷಣದ ಅವಕಾಶಗಳಿಂದ ವಂಚಿತರಾಗಿದ್ದಾರೆ ಎಂದರು.

ಸಾಮಾಜಿಕ ಕಾರ್ಯಕರ್ತೆ ಗಾಯತ್ರಿ ಎನ್. ಮಾತನಾಡಿ, ‘ಬ್ರಿಟಿಷ್ ಭಾರತದಲ್ಲಿ ಸಾವಿತ್ರಿಬಾಯಿ ಪುಲೆ ನಡೆಸಿದ ಶಿಕ್ಷಣ ಕ್ರಾಂತಿಯ ಫಲವಾಗಿ ಇಂದು ಸ್ತ್ರೀಯರು ಅಧಿಕ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಪಡೆಯುವ ಅವಕಾಶ ಲಭ್ಯವಾಗಿದೆ. ಚರಿತ್ರೆಯ ಉದ್ದಕ್ಕೂ ಮಹಿಳೆಯರನ್ನು ಕಡೆಗಣಿಸಿದಂತೆ ಸಾವಿತ್ರಿಬಾಯಿ ಪುಲೆಯವರ ಸ್ತ್ರೀ ಸಬಲೀಕರಣದ ಅಮೋಘ ಕೊಡುಗೆಯನ್ನು ಕಡೆಗಣಿಸಲಾಗಿತ್ತು. ಬಹಳ ತಡವಾಗಿ ಸ್ಮರಿಸಲಾಗುತ್ತಿದೆ’ ಎಂದು ವಿಶ್ಲೇಷಿಸಿದರು.

ಸಿಂಡಿಕೇಟ್ ಸದಸ್ಯರಾದ ಆಯಿಷಾ ಫರ್ಜಾನ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಮೇಧಾ ಇಟಗಿ ಹುಯಿಲಗೋಳ, ವಾಣಿಜ್ಯ ನಿಕಾಯದ ಡೀನ್ ಕೆ.ಆರ್. ಜಲಜಾ, ಸಿಂಡಿಕೇಟ್ ಸದಸ್ಯರಾದ ಶಿಲ್ಪಶ್ರೀ, ಎಚ್. ಕೃಷ್ಣರಾಮ್, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾದ ನಂದಕಿಶೋರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.