ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು| ವಿಜ್ಞಾನ ಲೇಖಕಿ ಸುಮಂಗಳಾ ಮುಮ್ಮಿಗಟ್ಟಿ ನಿಧನ

Last Updated 12 ಮಾರ್ಚ್ 2023, 3:26 IST
ಅಕ್ಷರ ಗಾತ್ರ

ಬೆಂಗಳೂರು: ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರ ಪ್ರಶಸ್ತಿ ವಿಜೇತರಾದ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಶ್ರೀಮತಿ ಸುಮಂಗಳಾ ಎಸ್ ಮುಮ್ಮಿಗಟ್ಟಿಯವರು ಇಂದು ಮುಂಜಾನೆ(12-3-2023) ನಿಧನರಾಗಿದ್ದಾರೆ.

ಸುಮಾರು 40ಕ್ಕೂ ಹೆಚ್ಚು ವಿಜ್ಞಾನದ ಕೃತಿಗಳು, ಸಾವಿರಾರು ಲೇಖನಗಳನ್ನು, ನೂರಾರು ವಿಜ್ಞಾನ ಕಾರ್ಯಕ್ರಮಗಳನ್ನು ರೂಪಿಸಿದ್ದ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಅವುಗಳಲ್ಲಿ, ಪರಿಸರ ಪ್ರಶಸ್ತಿ ರೇಡಿಯೋ ಅಸ್ಕರ್ ಅಂತರಾಷ್ಟ್ರೀಯ ಪ್ರಶಸ್ತಿಯ ಪ್ರಮುಖವಾಗಿವೆ.

ಇತ್ತಿಚೆಗೆ ಪ್ರಕಟವಾದ ವಿಜ್ಞಾನ ತಂತ್ರಜ್ಞಾನ ದರ್ಶನ ಅವರ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ. ಅದ್ಬುತ ಆವಾಸ ಅಂಡಮಾನ್, ಅಲ್ಲಮ ಪ್ರಭು, ಮತ್ತಿತರ ಕೃತಿಗಳು ಅವರ ಬರವಣಿಗೆಯ ವಿಸ್ತಾರಕ್ಕೆ ಉದಾಹರಣೆಯಾಗಿವೆ.

ಹಲವಾರು ವಿಜ್ಞಾನ ಸಂವಹನಕಾರರನ್ನು ಹುರಿದುಂಬಿಸಿ ವಿಜ್ಞಾನ ಸಂವಹನಕಾರರ ಒಂದು ಪಡೆಯನ್ನು ಕಟ್ಟಿ ಬೆಳಸಿದ ಕೀರ್ತಿ ಸುಮಂಗಳಾ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT