ಗುರುವಾರ , ಆಗಸ್ಟ್ 11, 2022
26 °C

ಸಿನಿಮಾ ಕಟೌಟ್ ಬದಲಿಸಲು ಹೋಗಿ ಸೆಕ್ಯುರಿಟಿ ಸಿಬ್ಬಂದಿ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಾಂಧಿನಗರದಲ್ಲಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ಕಟೌಟ್ ಬದಲಾಯಿಸಲು ಹೋಗಿ ಸೆಕ್ಯುರಿಟಿ ಸಿಬ್ಬಂದಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.

‘ಮೃತ ವ್ಯಕ್ತಿ ಹೆಸರು ತಿಳಿದುಬಂದಿಲ್ಲ. ಆದರೆ, ಅವರ ಬಟ್ಟೆ ಮೇಲೆ ‘ರಾಜು ಸೆಕ್ಯುರಿಟಿ ಏಜೆನ್ಸಿ, ಸುಲ್ತಾನ್‌ಪಾಳ್ಯ’ ಎಂಬ ಬರಹವಿದೆ. ಇದರ ಮೂಲಕ ಮೃತರ ಹೆಸರು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತ್ರಿವೇಣಿ ಚಿತ್ರಮಂದಿರದ ಎದುರು ಸಿನಿಮಾ ಕಟೌಟ್‌ ಇದೆ. ಹೊಸ ಸಿನಿಮಾ ಬರುತ್ತಿದ್ದರಿಂದ ಕಟೌಟ್‌ ಬದಲಾವಣೆ ಮಾಡಲಾಗುತ್ತಿತ್ತು. ಹಳೇ ಸಿನಿಮಾದ ಕಟೌಟ್ ತೆಗೆದು ಹೊಸ ಕಟೌಟ್ ಹಾಕಲಾಗುತ್ತಿತ್ತು. ಸೆಕ್ಯುರಿಟಿ ಸಿಬ್ಬಂದಿ ಆಗಿದ್ದ ವ್ಯಕ್ತಿ, ಕಟೌಟ್‌ ಮೇಲೆ ಹತ್ತಿ ಪೋಸ್ಟರ್ ಬದಲಾವಣೆ ಮಾಡುತ್ತಿದ್ದರು. ಅದೇ ವೇಳೆಯೇ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

‘ಘಟನೆ ವೇಳೆ ಚಿತ್ರಮಂದಿರಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ಯಾರು ಇರಲಿಲ್ಲ. ಸೆಕ್ಯುರಿಟಿ ಸಿಬ್ಬಂದಿ ಬಿದ್ದಿದ್ದು ನೋಡಿ ದಾರಿಹೋಕರು ರಕ್ಷಣೆಗೆ ಹೋಗಿದ್ದರು. ತೀವ್ರ ರಕ್ತಸ್ರಾವವಾಗಿದ್ದರಿಂದ ಸೆಕ್ಯುರಿಟಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಹೇಳಿದರು.

’ಕಟೌಟ್‌ ಬದಲಾವಣೆ ಮಾಡಲು ಚಿತ್ರಮಂದಿರದಲ್ಲಿ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಆದರೆ, ಆ ಕೆಲಸವನ್ನು ಸೆಕ್ಯುರಿಟಿ ಸಿಬ್ಬಂದಿಗೆ ಮಾಡಲು ಹೇಳಿದವರು ಯಾರು? ಘಟನೆಗೆ ಯಾರ ನಿರ್ಲಕ್ಷ್ಯ ಕಾರಣ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಹಿರಿಯ ಅಧಿಕಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು