ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ: ಪಿಎಸ್‌ಐ ಬಂಧನ

Published 13 ಮಾರ್ಚ್ 2024, 23:31 IST
Last Updated 13 ಮಾರ್ಚ್ 2024, 23:31 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಾರಿಕಾ ಭದ್ರತಾ‌ಪಡೆಯ (ಕೆಎಸ್‌ಐಎಸ್ಎಫ್) ಮಹಿಳಾ ಪಿಎಸ್‌ಐ ಜೊತೆಗಿನ ವೈಯಕ್ತಿಕ ದೃಶ್ಯಗಳನ್ನು ಸೆರೆಹಿಡಿದು ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪಿಎಸ್‌ಐ ಒಬ್ಬರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕೆಎಸ್‌ಐಎಸ್‌ಎಫ್‌ನ ಎನ್.ಬಿ.ಸಂಜಯ್ ಕುಮಾರ್ (34) ಬಂಧಿತ ಪಿಎಸ್‌ಐ. ಇವರ ಜೊತೆಗೆ ಕೆಲಸ ಮಾಡುತ್ತಿದ್ದ ಮಹಿಳಾ ಪಿಎಸ್‌ಐ ನೀಡಿದ ದೂರು ಆಧರಿಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತರಬೇತಿ ವೇಳೆ ಇಬ್ಬರು ಪರಸ್ಪರ ಪರಿಚಯವಾಗಿದ್ದರು. ಸಂಜಯ್ ಪ್ರೇಮ ನಿವೇದನೆ ಮಾಡಿದ್ದ. ಇದನ್ನು ದೂರುದಾರರಾದ ಮಹಿಳಾ ಪಿಎಸ್ಐ ತಿರಸ್ಕರಿಸಿದ್ದರು.‌

‘ನಾನು ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂದು ನಿರ್ಧರಿಸಿದ್ದೇನೆ ಎಂದು‌ ಹೇಳಿ, ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಂತೆಯೂ ಕೋರಿದ್ದರು. ಇದನ್ನೇ ನೆಪಮಾಡಿಕೊಂಡು ನನಗೆ ಹತ್ತಿರವಾಗಿ ತೊಂದರೆ ಕೊಡುತ್ತಿದ್ದರು. ಅಲ್ಲದೇ ಆಗಾಗ್ಗೆ ಹಣ ತೆಗೆದುಕೊಂಡು ವಾಪಸ್ ಕೊಡುತ್ತಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘2020ರಲ್ಲಿ ನನ್ನಿಂದ ₹5.50 ಲಕ್ಷ ತೆಗೆದುಕೊಂಡಿದ್ದರು. ಓದುವ ನೆಪದಲ್ಲಿ ಹತ್ತಿರವಾಗಿ ಅವರೊಂದಿಗೆ ನಾನು ಜೊತೆಗಿರುವ ಸಮಯದ ಛಾಯಾಚಿತ್ರಗಳನ್ನು ನನಗೆ ತಿಳಿಯದೆ ತೆಗೆದುಕೊಂಡಿ ದ್ದರು. ಅವುಗಳನ್ನು ಇಟ್ಟುಕೊಂಡು‌ ಬ್ಲ್ಯಾಕ್ ಮೇಲ್ ಮಾಡಿ ನನಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದರು. ಅಲ್ಲದೇ ಮದುವೆ ಆಗುವಂತೆ ಬಲವಂತ ಮಾಡಿ ಕೈಕೊಯ್ದುಕೊಳ್ಳುವುದನ್ನು ಮಾಡುತ್ತಿದ್ದರು. ಮಾರ್ಚ್ 11ರಂದು ಸಂಜಯ್ ನನ್ನ ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದರು’ ಎಂದು ದೂರಿನಲ್ಲಿ
ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT