ಮಂಗಳವಾರ, ನವೆಂಬರ್ 12, 2019
20 °C

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಬಂಧನ

Published:
Updated:

ಬೆಂಗಳೂರು: ಪೇಯಿಂಗ್‌ ಗೆಸ್ಟ್‌ ಕಟ್ಟಡದಲ್ಲಿದ್ದ (ಪಿ.ಜಿ) ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಪಿ.ಜಿ ಕಟ್ಟಡ ಮಾಲೀಕ ಸರ್ವರ್ ಅಹಮದ್ ಎಂಬಾತನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಶ್ವನಾಥಪುರದ ಹೆಸರುಘಟ್ಟ ಮುಖ್ಯರಸ್ತೆಯಲ್ಲಿ ಅಹಮದ್ ಪಿ.ಜಿ. ನಡೆಸುತ್ತಿದ್ದ. ಆ ಪಿ.ಜಿಗೆ ಕೆಲವು ತಿಂಗಳ ಹಿಂದೆ ಎಂಜಿನಿಯರಿಂಗ್ ಓದುತ್ತಿದ್ದ ಸಂತ್ರಸ್ತ ವಿದ್ಯಾರ್ಥಿ ದಾಖಲಾಗಿದ್ದಳು. ಪತ್ನಿ ಜತೆ ಆರೋಪಿ ಕಟ್ಟಡದ ನೆಲಮಹಡಿಯಲ್ಲಿ ನೆಲೆಸಿದ್ದ.

‘ಪತ್ನಿ ಇಲ್ಲದ ವೇಳೆ ಕರೆ ಮಾಡಿ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದ. ನಾನು ಕರೆ ಸ್ವೀಕರಿಸದೆ ನಿರ್ಲಕ್ಷಿಸಿದ್ದೆ. ಆತನ ಕಿರುಕುಳ ಹೆಚ್ಚಾದಾಗ ಅವನ ಮನೆಗೆ ಹೋಗಿ ಜಗಳ ಮಾಡಿದ್ದೆ. ಈ ವೇಳೆ ಕೂಡ ಆತ ಲೈಂಗಿಕ ದೌರ್ಜನ್ಯ ನಡೆಸಿದ್ದ. ಎಚ್ಚರಿಕೆ ನೀಡಿದರೂ ವರ್ತನೆ ಬದಲಾಯಿಸಿಕೊಳ್ಳಲಿಲ್ಲ. ಸಹಪಾಠಿ ಕೊಠಡಿಯಿಂದ ಹೊರಗೆ ಹೋದ ಸಂದರ್ಭದಲ್ಲಿ ದೌರ್ಜನ್ಯ ಎಸಗಲು ಯತ್ನಿಸಿದ್ದ’ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿರುವ ವಿದ್ಯಾರ್ಥಿ, ಪಿ.ಜಿ ತೆರವುಗೊಳಿಸಿದ್ದಾರೆ.

ಪ್ರತಿಕ್ರಿಯಿಸಿ (+)