ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಬ್ದ’ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Published 2 ಮೇ 2024, 15:53 IST
Last Updated 2 ಮೇ 2024, 15:53 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಶಬ್ದ್ ಸಂಸ್ಥೆಯು ಹಿಂದಿ ಸಾಹಿತ್ಯ ಕ್ಷೇತ್ರ ಹಾಗೂ ಹಿಂದಿ ಪ್ರಚಾರ ಸೇವೆಗೆ ನೀಡಿದ ಕೊಡುಗೆಗಾಗಿ ಪ್ರಾರಂಭಿಸಿದ್ದ ‘ಅಗ್ಯೇಯ ಶಬ್ದ ಸೃಜನ್ ಸಮ್ಮಾನ್’ ಹಾಗೂ ‘ದಕ್ಷಿಣ ಭಾರತ ಶಬ್ದ ಹಿಂದಿ ಸೇವಾ ಸಮ್ಮಾನ್’ ಪ್ರಶಸ್ತಿಗಳಿಗೆ ಪ್ರವೇಶಗಳನ್ನು ಆಹ್ವಾನಿಸಿದೆ. 

ಈ ಪ್ರಶಸ್ತಿಗಳು ಕ್ರಮವಾಗಿ ₹1 ಲಕ್ಷ ಹಾಗೂ ₹21 ಸಾವಿರ ನಗದು ಒಳಗೊಂಡಿವೆ. ‘ಅಗ್ಯೇಯ ಶಬ್ದ ಸೃಜನ್ ಸಮ್ಮಾನ್’ ಪ್ರಶಸ್ತಿಗೆ ಸಾಹಿತಿಗಳು, ಕವಿಗಳು, ಬರಹಗಾರರನ್ನು ಸಾಹಿತ್ಯಿಕ ಕೊಡುಗೆಗಳ ಆಧಾರದ ಮೇಲೆ ಶಿಫಾರಸು ಮಾಡಬಹುದಾಗಿದೆ. 2021ರಿಂದ 2023ರವರೆಗೆ ಪ್ರಕಟವಾದ ಅವರ ಕೃತಿಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಿ, ಆಯ್ಕೆ ಮಾಡಲಾಗುತ್ತದೆ ಎಂದು ಶಬ್ದ ಲಿಟರರಿ ಸೊಸೈಟಿ ಅಧ್ಯಕ್ಷ ಶ್ರೀನಾರಾಯಣ ಸಮೀರ್ ತಿಳಿಸಿದ್ದಾರೆ. 

ಶಿಫಾರಸು ಮಾಡಲಾದ ಲೇಖಕರ ಹೆಸರಿನ ಜತೆಗೆ ಸಂಪರ್ಕ ವಿಳಾಸ ಹಾಗೂ ಮೂರು ವರ್ಷಗಳಲ್ಲಿ ಪ್ರಕಟವಾದ ಅವರ ಪುಸ್ತಕಗಳ ವಿವರ ಸಹಿತ ಸಂಕ್ಷಿಪ್ತ ವಿವರಣೆಯನ್ನು ಸಲ್ಲಿಸಬೇಕು. ಪ್ರವೇಶದೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಳುಹಿಸಬೇಕು ಎಂದು ಹೇಳಿದ್ದಾರೆ.

‘ದಕ್ಷಿಣ ಭಾರತ ಶಬ್ದ ಹಿಂದಿ ಸೇವೆ ಸಮ್ಮಾನ್’ ಪ್ರಶಸ್ತಿಗೆ ಹಿಂದಿಯ ಭಾಷೆಯ ಬೆಳವಣಿಗೆ ಮತ್ತು ಪ್ರಚಾರಕ್ಕೆ ಕೊಡುಗೆ ನೀಡಿದವರನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕೂ ಹೆಸರುಗಳನ್ನು ಶಿಫಾರಸು ಮಾಡಬಹುದಾಗಿದೆ. ಶಿಫಾರಸು ನಮೂದುಗಳನ್ನು ಜೂನ್ 30ರೊಳಗೆ ಅಧ್ಯಕ್ಷರು, ಶಬ್ದ್, ಬಿ-8/403, ಶ್ರೀರಾಮ್ ಸ್ಪಂದನ್, ಚೆಲ್ಲಘಟ್ಟ, ಬೆಂಗಳೂರು- 560037 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT