ಬೆಂಗಳೂರು: ಮಹಿಳಾ ಬೈಕರ್‌ಗಳನ್ನೇ ಹೊಂದಿರುವ ‘ಶಿ ಫಾರ್ ಸೊಸೈಟಿ’ ಎಂಬ ಸರ್ಕಾರೇತರ ಸ್ವಯಂ ಸೇವಾಸಂಸ್ಥೆಯು ಗಣರಾಜ್ಯೋತ್ಸವ ದಿನವಾದ ಮಂಗಳವಾರ ಬೆಂಗಳೂರಿನಿಂದ ಕೋಲಾರದವರೆಗೆ ‘ಮಹಿಳಾ ಬೈಕ್ ರ‍್ಯಾಲಿ ’ ಆಯೋಜಿಸಿದೆ.

ಕೋಲಾರದಲ್ಲಿನ 100ಕ್ಕೂ ಹೆಚ್ಚು ಯೋಧರ ಕುಟುಂಬಗಳಿಗೆ ವಿದ್ಯುತ್ ನಿರ್ವಹಣೆಗೆ ನೆರವಾಗಲು ಸೋಲಾರ್ ಪ್ಯಾನೆಲ್‌ಗಳ ಕಿಟ್‌ಗಳನ್ನು ಸಂಸ್ಥೆ ವಿತರಿಸಲಿದೆ.

‘ಹೊಸಕೋಟೆ ಟೋಲ್ ಬಳಿ ಇರುವ ಎಂ.ವಿ.ಜೆ. ಕಾಲೇಜು ಆವರಣದಿಂದ ರ‍್ಯಾಲಿ ಆರಂಭವಾಗಲಿದೆ. ಪೌರಾಡಳಿತ ಎಂ.ಟಿ.ಬಿ.ನಾಗರಾಜ್ ಚಾಲನೆ ನೀಡುವರು. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಕ್ಯಾಪ್ಟನ್ ನವೀನ್ ನಾಗಪ್ಪ, ಮಹಿಳಾ ಸೇನಾಧಿಕಾರಿ ಸ್ವಾತಿ ಬಸೇಡಿಯಾ ಪಾಲ್ಗೊಳ್ಳುವರು’ ಎಂದು ಸಂಸ್ಥೆಯ ಸಂಸ್ಥಾಪಕಿ ಹರ್ಷಿಣಿ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಒಟ್ಟು 75 ಮಹಿಳಾ ಬೈಕರ್‌ಗಳು, 150 ಪುರುಷರು ಪಾಲ್ಗೊಳ್ಳುತ್ತಿದ್ದಾರೆ. ಎಲ್ಲರೂ ಸೇನಾ ಟಿ ಶರ್ಟ್ ಹಾಕಿಕೊಂಡು ಸೇನಾ ಸ್ಫೂರ್ತಿ ಮೆರೆಯುವ ಉದ್ದೇಶವಿದೆ. ಜತೆಗೆ 30 ಅಡಿ ಉದ್ದದ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರಪ್ರೇಮ ಮೂಡಿಸುತ್ತೇವೆ’ ಎಂದರು.

‘ಕೋಲಾರದಲ್ಲಿ ಐದು ಸಾವಿರಕ್ಕೂ ಹೆಚ್ಚು ಸೇನಾ ಯೋಧರ ಕುಟುಂಬಗಳಿವೆ. ಇಲ್ಲಿ ವಿದ್ಯುತ್ ಸಮಸ್ಯೆ ಇದ್ದು, ಅಗತ್ಯವಿರುವ ನೂರು ಕುಟುಂಬಗಳಿಗೆ ಸೋಲಾರ್ ಪ್ಯಾನಲ್ ಕಿಟ್ ನೀಡಲಾಗುತ್ತಿದೆ. ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ಈ ಸೋಲಾರ್ ಪ್ಯಾನಲ್ ಬೆಳಕು ನೀಡಲಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.