ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಷಾದ್ರಿಪುರ ಪಿಯು ಕಾಲೇಜಿಗೆ 26 ರ‍್ಯಾಂಕ್‌

Last Updated 3 ಆಗಸ್ಟ್ 2020, 23:21 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯಾ ಟುಡೆ ನಡೆಸಿದ ದೇಶದ ಉತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ನಗರದ ಶೇಷಾದ್ರಿಪುರ ಸಂಯುಕ್ತ ಪದವಿ ಪೂರ್ವ ಕಾಲೇಜು 39ನೇ ರ‍್ಯಾಂಕ್‌ ಪಡೆದಿದೆ ಎಂದು ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ ತಿಳಿಸಿದ್ದಾರೆ.

ಶೇಷಾದ್ರಿಪುರ ಸಮೂಹ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜುಗಳು ಪ್ರಸಕ್ತ ಸಾಲಿನಲ್ಲಿ 26 ರ‍್ಯಾಂಕ್‌ಗಳನ್ನು ಪಡೆದಿದ್ದು, ಸರಾಸರಿ ಶೇ 83.60ರಷ್ಟು ಫಲಿತಾಂಶ ಬಂದಿದೆ. ಶೇಷಾದ್ರಿಪುರ ಸಂಯುಕ್ತ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಎ.ಎಸ್.ಶ್ರೀಕರಿ ಶ್ರಾವಣಿ (ಶೇ 97.83), ಆರ್.ಪಿ.ಧೀರಜ್ (ಶೇ 97.17), ಬಿ.ಪ್ರಥಮ್ (ಶೇ 96.67), ವಾಣಿಜ್ಯ ವಿಭಾಗದಲ್ಲಿ ಜಿ.ಬಿ.ಶ್ರೀಲಕ್ಷ್ಮೀ, ಆರ್.ವೀಣಾ, ಆರ್.ಮೇಘಶ್ರೀ, ಎನ್.ಸ್ವಾತಿ, ಬಿ.ಆರ್.ಪವಿತ್ರಾ ತಲಾ ಶೇ 97.67, ತನುಶ್ರೀ, ಅರ್ಕಸಾಲಿ, ಎನ್.ಎಸ್.ಕೃತಿಕಾ, ಎಂ.ಅಕ್ಷಿತಾ ಶೇ 97.33, ತನಿಷಾ ಸಿ.ಕುಲಕರ್ಣಿ (ಶೇ 97), ಜೆ.ಎಂ.ಲಾವಣ್ಯ (ಶೇ 96.83), ಎಂ.ಭೂಮಿಕಾ (ಶೇ 96.67), ಡಿ.ಜಿ.ಕೋಮಲ್ (ಶೇ 96.33) ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ‌ ಯಲಹಂಕ, ಶೇಷಾದ್ರಿಪುರ, ಕೆಂಗೇರಿ, ಮಾಗಡಿ ರಸ್ತೆಯ ಪಿಯು ಕಾಲೇಜುಗಳಲ್ಲಿ ಹಲವು ವಿದ್ಯಾರ್ಥಿಗಳು ರ‍್ಯಾಂಕ್‌ಗಳಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT