ಬೆಂಗಳೂರು: ಪತ್ನಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ, ಸಿಗರೇಟ್‍ನಿಂದ ಸುಟ್ಟು ವಿಕೃತಿ ಮೆರೆದಿದ್ದ ಪತಿಯನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

ಹೆಬ್ಬಾಳದ ನಿವಾಸಿ 27 ವರ್ಷದ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಈಕೆಯ ಪತಿ ಕುಮಾರ್ (35) ಎಂಬಾತನನ್ನು ಬಂಧಿಸಲಾಗಿದೆ.

‘ಪರಸ್ಪರ ಪ್ರೀತಿಸಿ 2017ರಲ್ಲಿ ವಿವಾಹವಾಗಿದ್ದೆವು. ಮೊದಲಿಗೆ ಅನ್ಯೋನ್ಯವಾಗಿದ್ದೆವು. ಕೆಲವು ದಿನಗಳ ಬಳಿಕ ಕುಮಾರ್ ಕೆಲಸಕ್ಕೆ ಹೋಗದೆ ಕಿರುಕುಳ ನೀಡಲು ಆರಂಭಿಸಿದ್ದರು. ನನ್ನ ಪಾಲಕರಿಂದ ಪಡೆದಿದ್ದ ಸಾಲ ಹಿಂದಿರುಗಿಸದೆ ದುಂದು ವೆಚ್ಚ ಮಾಡುತ್ತಿದ್ದರು. ನಿತ್ಯ ಮದ್ಯಸೇವಿಸಿ ಹಲ್ಲೆ ನಡೆಸುತ್ತಿದ್ದರು. ಬಲವಂತವಾಗಿ ಅಶ್ಲೀಲ ಚಿತ್ರಗಳನ್ನು ತೋರಿಸಿ, ದೇಹಕ್ಕೆ ಸಿಗರೇಟ್‍ನಿಂದ ಸುಟ್ಟು, ಹಲ್ಲೆ ನಡೆಸುತ್ತಿದ್ದರು. ಜು.27ರಂದು ತಲೆಯನ್ನು ಗೋಡೆಗೆ ಗುದ್ದಿ ಗಂಭೀರ ಹಲ್ಲೆ ನಡೆಸಿದ್ದರು’ ಎಂದು ಪತ್ನಿ ದೂರು ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.