ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ವಂಚಿತರಿಂದ ಜಂಟಿ ಆಯುಕ್ತರ ಕಚೇರಿಗೆ ಮುತ್ತಿಗೆ

Last Updated 4 ಮಾರ್ಚ್ 2021, 5:55 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ರಾಜರಾಜೇಶ್ವರಿನಗರ ಕ್ಷೇತ್ರದ ಪಂತರಪಾಳ್ಯ ಸರ್ವೆ ನಂ 59 ರಲ್ಲಿ ನಿವೇಶನರಹಿತ ಎಲ್ಲ ಜಾತಿಯ ಕಡುಬಡವರಿಗೆ ನಿವೇಶನ ನೀಡಬೇಕೆಂದು ಹೈಕೋರ್ಟ್‌ ಆದೇಶ ನೀಡಿದೆ. ಆದರೂ ಬಿಬಿಎಂಪಿ ಅಧಿಕಾರಿಗಳು ಉಳ್ಳವರಿಗೆ ನಿವೇಶನ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಹಿಂದುಳಿದವರ ಸಮಗ್ರ ಅಭಿವೃದ್ದಿ ಸಂಘ, ಕರ್ನಾಟಕ ಜನಾಂದೋಲನ ಸಂಘಟನೆಯ ಕಾರ್ಯಕರ್ತರು ಮತ್ತು ನಿವೇಶನ ವಂಚಿತರು ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಂತರಪಾಳ್ಯ ಸರ್ವೆ ನಂ 23 ರಲ್ಲಿ ತೆರವುಗೊಂಡ 200 ಗುಡಿಸಲು ವಾಸಿಗಳಿಗೆ ಸರ್ವೆ ನಂ 59ಕ್ಕೆ ಸೇರಿದ ಪ್ರಮೋದ್ ಬಡಾವಣೆಯಲ್ಲಿ ನಿವೇಶನಗಳನ್ನು ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಹಣಬಲ ಅಧಿಕಾರ ಬಲ ಇರುವವರಿಗೆ ನಿವೇಶನ ಹಕ್ಕು ಪತ್ರ ನೀಡಿ ನಿಜವಾದ ಕಡುಬಡವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.

ದಲಿತ ಹಿಂದುಳಿದವರ ಸಮಗ್ರ ಅಭಿವೃದ್ದಿ ಸಂಘದ ಅಧ್ಯಕ್ಷ ಕೆ.ಸಂಪತ್ ಮಾತನಾಡಿ,‘15 ದಿವಸದೊಳಗಾಗಿ ನ್ಯಾಯ ಸಿಗದಿದ್ದರೆ ಮುಖ್ಯಮಂತ್ರಿಗಳ ಕಚೇರಿ ಮುಂದೆ ಉಪವಾಸ ನಡೆಸಲಾಗುವುದುʼ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT