ಈ ಮಧ್ಯೆ ಔಷಧಿ ತರುವಂತೆ ಅಕ್ಕ ಶಶಿಕಲಾಗೆ, ತಂಗಿ ಚಂದ್ರಿಕಾ ಹೊಂಡಾ ಆ್ಯಕ್ಟಿವಾ ವಾಹನದ ಕೀ ನೀಡಿದ್ದರು. ಕೀ ಬಂಚ್ನಲ್ಲಿ ಮನೆಯ ಕೀ ಸಹ ಇತ್ತು. ಇದನ್ನು ಗಮನಿಸಿದ ಶಶಿಕಲಾ, ದ್ವಿಚಕ್ರ ವಾಹನದ ಮೂಲಕ ನೇರವಾಗಿ ಆಡುಗೋಡಿಯಲ್ಲಿರುವ ತಂಗಿ ಮನೆಗೆ ಬರುವಾಗ ಮಾರ್ಗ ಮಧ್ಯೆ ತನ್ನ ದೊಡ್ಡಮ್ಮನನ್ನು ಕರೆದುಕೊಂಡು ಬಂದಿದ್ದರು. ತಂಗಿ ಮನೆಗೆ ಸುಮಾರು 100 ಮೀಟರ್ ದೂರದಲ್ಲಿ ದೊಡ್ಡಮ್ಮನನ್ನು ಇಳಿಸಿದ್ದರು. ಬಳಿಕ ತಂಗಿಯ ಮನೆಯ ಬೀಗ ತೆಗೆದು, ಬೀರುವಿನ ಕೀ ಹುಡುಕಾಡಿದ್ದಾರೆ. ಸಿಗದಿದ್ದಾಗ ಬೀರು ಬಾಗಿಲನ್ನು ಒಡೆದು 74 ಗ್ರಾಂ. ಚಿನ್ನ ಹಾಗೂ 354 ಗ್ರಾಂ. ಬೆಳ್ಳಿ ಆಭರಣ ಕಳವು ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.