ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಗಂಗೆ: ಹೊಸವರ್ಷ ಜನದಟ್ಟಣೆ

Published 1 ಜನವರಿ 2024, 23:22 IST
Last Updated 1 ಜನವರಿ 2024, 23:22 IST
ಅಕ್ಷರ ಗಾತ್ರ

ದಾಬಸ್ ಪೇಟೆ: ವರ್ಷದ ಮೊದಲ ದಿನವಾದ ಸೋಮವಾರ ನೆಲಮಂಗಲ ತಾಲ್ಲೂಕಿನ ಯಾತ್ರಾ ಸ್ಥಳ ಶಿವಗಂಗೆ ಬೆಟ್ಟದಲ್ಲಿ ಭಕ್ತರಿಂದ ತುಂಬಿ ಹೋಗಿತ್ತು.

ಹೊಸ ವರ್ಷದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತಾ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಡಿ.30 ರ ಸಂಜೆ 6ರಿಂದ ಜ.1ರ ಮಧ್ಯರಾತ್ರಿ 12ರ ವರೆಗೆ ಶಿವಗಂಗೆ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

ಆದರೆ ಸೋಮವಾರ ಬೆಳಿಗ್ಗಿನಿಂದಲೇ ಪ್ರವಾಸಿಗರು ಬೆಟ್ಟಕ್ಕೆ ಆಗಮಿಸಿದರು. 25 ಸಾವಿರಕ್ಕೂ ಹೆಚ್ಚು ಭಕ್ತರು ಶಿವಗಂಗಾ ಕ್ಷೇತ್ರಕ್ಕೆ ಭೇಟಿ ನೀಡಿದರು.

ಹೊಸ ವರ್ಷದ ಪ್ರಯುಕ್ತ ಇಲ್ಲಿನ ಮೂಲ ದೇವರಾದ ಗಂಗಾಧರೇಶ್ವರ ಸ್ವಾಮಿಗೆ ವಿಶೇಷವಾದ ಅಲಂಕಾರವನ್ನು ಮಾಡಲಾಗಿತ್ತು. ಭಕ್ತರು ಕೇವಲ ಗಂಗಾಧರೇಶ್ವರ, ಹೊನ್ನಾದೇವಿ, ದೊಡ್ಡಗಣಪಗೆ ಪೂಜೆ ಸಲ್ಲಿಸಿದರು. ಪಾತಾಳ ಗಂಗೆಯ ದರ್ಶನ ಮಾತ್ರ ಪಡೆದರು.

ಕಾರ್ಯನಿರ್ವಹಣಾಧಿಕಾರಿ ಕೆ.ರಮ್ಯ, ಪಾರುಪತ್ತೇದಾರ್ ಎಸ್. ಸುಮಾ. ಪ್ರಧಾನ ಅರ್ಚಕರಾದ ಎಸ್.ಕೆ. ಶ್ಯಾಮ್ ಪ್ರಸಾದ್ ದೀಕ್ಷಿತ್ ಮತ್ತು ತಂಡ ಪೂಜಾ ಕಾರ್ಯಗಳನ್ನು ನೇರವೇರಿಸಿತು.

ಪೊಲೀಸ್‌ ಅಧಿಕಾರಿಗಳಾದ ಬಿ.ರಾಜು, ವಿಜಯಕುಮಾರಿ ಬಂದೋಬಸ್ತ್‌ ಉಸ್ತುವಾರಿ ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT