ಗುರುವಾರ , ಡಿಸೆಂಬರ್ 8, 2022
18 °C
ಪೀಪಲ್ ಟ್ರೀ ಸ್ಲೀಪ್ ಕೇರ್ ಸೆಂಟರ್‌ನಿಂದ ಅಧ್ಯಯನ

‘ಉದ್ಯೋಗಸ್ಥರಿಗೆ ನಿದ್ದೆ ಸಮಸ್ಯೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉದ್ಯೋಗಸ್ಥ ವಯಸ್ಕರಿಗೆ ನಿದ್ದೆ ಸಮಸ್ಯೆ ಕಾಡುತ್ತಿದೆ. ಪ್ರತಿ 10 ಮಂದಿಯಲ್ಲಿ ನಾಲ್ವರು ನಿದ್ದೆಯ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವುದು ಪೀಪಲ್ ಟ್ರೀ ಇಂಟಿಗ್ರೇಟೆಡ್ ಸ್ಲೀಪ್ ಕೇರ್ ಸೆಂಟರ್ ಅಧ್ಯಯನದಿಂದ ತಿಳಿದುಬಂದಿದೆ.

ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆ ಸ್ಥಾಪಿಸಿರುವ ಈ ಕೇಂದ್ರವನ್ನು ಬುಧವಾರ ಉದ್ಘಾಟಿಸಿದ ಕಂದಾಯ ಸಚಿವ ಆರ್. ಅಶೋಕ, ‘ಬದಲಾದ ಜೀವನಶೈಲಿಯಿಂದ →ಯುವಜನರು ನಿದ್ರಾಹೀನತೆ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರಿಂದ ಕೆಲವರಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಹೇಳಿದರು.

ಮನೋವೈದ್ಯ ಡಾ. ಸತೀಶ್ ರಾಮಯ್ಯ, ‘ಶೇ 42ರಷ್ಟು ಜನರು ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಶೇ 30ರಷ್ಟು ಮಂದಿ ಆಗಾಗ್ಗೆ ನಿದ್ದೆಯಿಂದ ಎಚ್ಚರಗೊಳ್ಳುತ್ತಾರೆ. ಇನ್ನುಳಿದವರು ಮಾತ್ರ ಸಮರ್ಪಕವಾಗಿ ನಿದ್ದೆ ಮಾಡುತ್ತಿದ್ದಾರೆ →ಎನ್ನುವುದು →ಅಧ್ಯಯನದಿಂದ →ತಿಳಿದುಬಂದಿದೆ. →ನಿದ್ದೆಯ ಸಮಸ್ಯೆ ಎದುರಿಸುತ್ತಿರುವ ಬಹುತೇಕರಿಗೆ ಏನು ಮಾಡಬೇಕು ಎನ್ನುವುದು ತಿಳಿದಿಲ್ಲ’ ಎಂದರು. 

ಆಸ್ಪತ್ರೆಯ ಡಾ.ಜೋತಿ ನೀರಜಾ, ‘ನಿದ್ದೆಯು ನಮ್ಮ ಆರೋಗ್ಯವನ್ನು ಸೂಚಿಸುತ್ತದೆ. ನಿದ್ದೆಯ ಸಮಸ್ಯೆ ಕಾಣಿಸಿಕೊಂಡಲ್ಲಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇರುತ್ತದೆ. ನಮ್ಮಲ್ಲಿನ ರೋಗನಿರೋಧಕ ಶಕ್ತಿಯೂ ಕಡಿಮೆ ಆಗಲಿದೆ. ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ’ ಎಂದು ಹೇಳಿದರು. 

‘ಕೇಂದ್ರದಲ್ಲಿ ಮನೋವೈದ್ಯರು, ಆಹಾರ ತಜ್ಞರು ಸೇರಿ ವಿವಿಧ ವೈದ್ಯಕೀಯ ತಜ್ಞರು ಇದ್ದಾರೆ. ನಿದ್ದೆ ಪ್ರಯೋಗಾಲಯ ಸೇರಿ ವಿವಿಧ ಸೌಲಭ್ಯಗಳಿವೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು