ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸಸೌಧದಲ್ಲಿ ‘ಪ್ರಾಜೆಕ್ಟ್‌ ರಶ್ಮಿ’ ಆರಂಭ: ಮಹಿಳೆಯರಿಗೆ ವಿಶ್ರಾಂತಿ ಕೊಠಡಿ

Last Updated 23 ಮಾರ್ಚ್ 2023, 23:01 IST
ಅಕ್ಷರ ಗಾತ್ರ

ಬೆಂಗಳೂರು: ವಿಕಾಸಸೌಧದ ಮೂರನೇ ಮಹಡಿಯಲ್ಲಿ ಬೆಂಗಳೂರು ಸ್ಮಾರ್ಟ್‌ ಸಿಟಿ ವತಿಯಿಂದ ‘ಪ್ರಾಜೆಕ್ಟ್‌ ರಶ್ಮಿ’
ಯೋಜನೆಯಡಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿಯನ್ನು ಆರಂಭಿಸಲಾಗಿದೆ.

ಮುಖ್ಯ ಕಾರ್ಯದರ್ಶಿ ವಂದಿತಾಶರ್ಮ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಗುರುವಾರ ಈ ಕೊಠಡಿಗೆ ಚಾಲನೆ ನೀಡಿದರು.

ಮಹಿಳೆಯರ ಈ ವಿಶೇಷ ಕೊಠಡಿಯಲ್ಲಿ ಆರೋಗ್ಯಕರ ಪರಿಸರದೊಂದಿಗೆ ಸ್ವಚ್ಛ ಕುಡಿಯುವ ನೀರು, ಶಿಶುಪಾಲನಾ ಕೊಠಡಿ, ಶೌಚಾಲಯ, ಹಾಲುಣಿಸುವ ತಾಯಿ ಹಾಗೂ ಗರ್ಭಿಣಿಯರಿಗೆ ಅನುಕೂಲಕರ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ಇದಕ್ಕಾಗಿ ₹53 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಬೆಂಗಳೂರು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಕೆ. ಶ್ರೀನಿವಾಸ್‌ ಮಾಹಿತಿ ನೀಡಿದರು.

ಕೊಠಡಿಯಲ್ಲಿ ಮಿನಿ ಫ್ರಿಜ್‌,ಮೈಕ್ರೋ ಓವನ್‌, ವಾಟರ್‌ ಫಿಲ್ಟರ್‌, ಸೋಫಾಗಳು, ಡೈನಿಂಗ್‌ ಟೇಬಲ್‌ಗಳು, ಲೆಗ್‌ ಮಸಾಜ್‌ ಚೇರ್‌, ಸ್ಯಾನಿಟರಿ ವಿಲೇವಾರಿ ಡೆಸ್ಟ್‌ ಬಿನ್ಸ್‌, ಹ್ಯಾಂಡ್‌ ಡ್ರೈಯರ್‌, ಒಣ ಮತ್ತು ಹಸಿ ತ್ಯಾಜ್ಯಕ್ಕೆ ಪ್ರತ್ಯೇಕ ಬಕೆಟ್‌, ವೈಫೈ ಸಂಪರ್ಕ, ಎಲ್‌ಇಡಿ ವಿದ್ಯುತ್‌ ವ್ಯವಸ್ಥೆಗಳಿವೆ ಎಂದು ಬೆಂಗಳೂರು ಸ್ಮಾರ್ಟ್‌ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಹೇಳಿದರು.

ಯೋಜನೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಶಾಲಿನಿ ರಜನೀಶ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT