ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾಬಸ್ ಪೇಟೆ | ರೈಲಿಗೆ ಸಿಲುಕಿ 46 ಕುರಿಗಳ ಸಾವು

Published 14 ಮೇ 2024, 16:33 IST
Last Updated 14 ಮೇ 2024, 16:33 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಇಲ್ಲಿನ ನಿಡವಂದ-ದಾಬಸ್ ಪೇಟೆ ರೈಲು ನಿಲ್ದಾಣಗಳ ನಡುವೆ ಮಂಗಳವಾರ ಚಲಿಸುತ್ತಿದ್ದ ರೈಲಿಗೆ ಸಿಲುಕಿ 46 ಕುರಿಗಳು ಮೃತಪಟ್ಟಿವೆ.

ತುಮಕೂರು ಜಿಲ್ಲೆಯ, ಶಿರಾ ತಾಲ್ಲೂಕಿನ ದೊಡ್ದ ಆಲದ ಮರದ ಚನ್ನಹಳ್ಳಿ ಗ್ರಾಮದ ಕುರಿಗಾಹಿ ದೇವರಾಜು ಪೆಮ್ಮನಹಳ್ಳಿ ಹತ್ತಿರದ ಕೆರೆ ಅಂಗಳದಲ್ಲಿ ಕುರಿ ಮೇಯಿಸುತ್ತಿದ್ದರು. ಮಧ್ಯಾಹ್ನ 3ರ ಸುಮಾರಿಗೆ ಮಳೆ ಬಂದಿತ್ತು. ಕೆರೆ ಅಂಗಳದಲ್ಲಿ ಮೇಯುತ್ತಿದ್ದ ಕುರಿಗಳು ರೈಲ್ವೆ ಹಳಿಯತ್ತ ಬಂದವು. ಅದೇ ವೇಳೆಗೆ ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಬಂದ ರೈಲಿನ ಅಡಿಗೆ ಕುರಿಗಳು ಸಿಕ್ಕಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಾನವೀಯತೆ ಮರೆತ ಅಧಿಕಾರಿಗಳು: ಕುರಿಗಾಹಿಯು ಸತ್ತ ಕುರಿಗಳನ್ನು ₹2ಸಾವಿರ, ₹3ಸಾವಿರಕ್ಕೆ ಮಾರಾಟ ಮಾಡಿ ನಷ್ಟ ಕಡಿಮೆ ಮಾಡಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ರೈಲ್ವೆ ಅಧಿಕಾರಿಗಳು, ಕುರಿಗಾಹಿಯನ್ನು ಬೆದರಿಸಿ ಕೆಲವು ಕುರಿ ತೆಗೆದುಕೊಂಡು ಹೋಗುತ್ತಿರುವುದನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT