ಬುಧವಾರ, ಜೂನ್ 29, 2022
24 °C

ಬ್ಯಾಂಕ್‌ ಅವ್ಯಹಾರ; ಠೇವಣಿದಾರರ ಆನ್‌ಲೈನ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ–ಆಪರೇಟಿವ್ ಲಿಮಿಟೆಡ್‌ ಅವ್ಯವಹಾರದಿಂದ ಹಣ ಕಳೆದುಕೊಂಡಿರುವ ಠೇವಣಿದಾರರು ಆನ್‌ಲೈನ್‌ ಮೂಲಕ ಭಾನುವಾರ ಪ್ರತಿಭಟನೆ ನಡೆಸಿದರು.

‘ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೊ ಹರಿಬಿಟ್ಟಿದ್ದ ಠೇವಣಿದಾರರು, ‘ಹಣ ದುರ್ಬಳಕೆ ಹಾಗೂ ಅವ್ಯವಹಾರ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಿ. ನಮ್ಮ ಠೇವಣಿ ಹಣವನ್ನು ಕೂಡಲೇ ವಾಪಸು ಕೊಡಿಸಿ’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರ, ಆರ್‌ಬಿಐ ಹಾಗೂ ಇತರೆ ಸಂಸ್ಥೆಗಳು ಬ್ಯಾಂಕ್‌ ವಹಿವಾಟು ಪರಿಶೀಲಿಸಿ, ಗ್ರಾಹಕರ ನಂಬಿಕೆಯ ಬ್ಯಾಂಕ್ ಎಂದು ಪ್ರಮಾಣ ಪತ್ರ ಸಮೇತ ಕೊಂಡಾಡಿದ್ದವು. ಅದನ್ನು ನಂಬಿ ಲಕ್ಷಾಂತರ ರೂಪಾಯಿ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಲಾಗಿತ್ತು. ಈಗ ಎಲ್ಲರೂ ಬೀದಿಗೆ ಬಂದಿದ್ದೇವೆ’ ಎಂದೂ ಠೇವಣಿದಾರರು ಹೇಳಿದರು.

‘ಸರ್ಕಾರಿ ನೌಕರರು, ನಿವೃತ್ತ ನೌಕರರು ಹಾಗೂ ಹಲವರು ಬ್ಯಾಂಕ್‌ ಠೇವಣಿದಾರರು. ನಿವೃತ್ತಿ ವೇತನ ಹಾಗೂ ಉಳಿತಾಯದ ಹಣವನ್ನೆಲ್ಲ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದರು. ಇದೀಗ ಹಣವನ್ನು ಕಳೆದುಕೊಂಡಿರುವ ಅವರೆಲ್ಲ ಹಾಸಿಗೆ ಹಿಡಿದಿದ್ದಾರೆ. ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ’ ಎಂದೂ ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು