ಬೆಂಗಳೂರು: ರಾಜಕಾಲುವೆಯ ಬಫರ್ ಝೋನ್ನಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವ ಪ್ರಥಮ ಹಂತದ ಯೋಜನೆಗೆ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ನಿಯಮಿತ (ಬಿ–ಸ್ಮೈಲ್) ಚಾಲನೆ ನೀಡಿದೆ.

ಮೈಸೂರು ರಸ್ತೆ, ಹೊರವರ್ತುಲ ರಸ್ತೆ ಹಾಗೂ ಬಳ್ಳಾರಿ ರಸ್ತೆ, ನಾಗವಾರ ರಸ್ತೆಗಳ ಸುತ್ತಮುತ್ತಲಿನ ರಾಜಕಾಲುವೆಗಳ ಬಫರ್ ಝೋನ್ನಲ್ಲಿ ಮೊದಲ ಹಂತದಲ್ಲಿ ಸುಮಾರು 42 ಕಿ.ಮೀ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಬಿ–ಸ್ಮೈಲ್ ಅಲ್ಪಾವಧಿ ಟೆಂಡರ್ ಕರೆದಿದ್ದು, ಆಗಸ್ಟ್ 18ರಂದು ಎಲ್ಲವನ್ನೂ ಅಂತಿಮಗೊಳಿಸಿ, ತಿಂಗಳಾಂತ್ಯದಲ್ಲಿ ಕಾರ್ಯಾದೇಶ ನೀಡಲು ಯೋಜಿಸಲಾಗಿದೆ.

ಮೊದಲ ಹಂತದಲ್ಲಿ ₹75 ಕೋಟಿ ವೆಚ್ಚದಲ್ಲಿ ನಾಲ್ಕು ಪ್ಯಾಕೇಜ್ಗಳಲ್ಲಿ 42 ಕಿ.ಮೀ ಸರ್ವಿಸ್ ರಸ್ತೆಯನ್ನು ಆರು ತಿಂಗಳಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. ರಾಜಕಾಲುವೆಯ ಅಳತೆಗೆ ಅನುಗುಣವಾಗಿ ಸರ್ವಿಸ್ ರಸ್ತೆಯ ಅಗಲ ನಿರ್ಧಾರವಾಗಲಿದೆ. ಕನಿಷ್ಠ 30 ಅಡಿಯಿಂದ ಗರಿಷ್ಠ 80 ಅಡಿ ಅಗಲದವರೆಗೆ ಸರ್ವಿಸ್ ರಸ್ತೆಗೆ ಜಾಗ ಸಿಗಲಿದೆ.

‘ಪ್ರಥಮ ಹಂತದ ರಾಜಕಾಲುವೆಯ ಬಫರ್ ಝೋನ್ ಕಾಲುವೆಯ ಮಧ್ಯಭಾಗದಿಂದ 50 ಮೀಟರ್ ಇರುತ್ತದೆ. ಇದರಲ್ಲಿ ಕಾಲುವೆಯ ವ್ಯಾಪ್ತಿ 15 ಮೀಟರ್ ಆಗಿರುತ್ತದೆ. 15 ಮೀಟರ್ ಅನ್ನು ಅಗ್ನಿಶಾಮಕ ದಳದ ಸೇವೆ ಮತ್ತು ಸೌಲಭ್ಯಕ್ಕಾಗಿ (ಫೈರ್ ಸೆಡಿಮೆಂಟ್) ಬಿಡಬೇಕಾಗುತ್ತದೆ. 15 ಮೀಟರ್ ಸೆಟ್ಬ್ಯಾಕ್ ಇರುತ್ತದೆ. ಉಳಿದ ಜಾಗದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತದೆ. ಅದೇ ರೀತಿ, ದ್ವಿತೀಯ ಹಂತದ ರಾಜಕಾಲುವೆಯಲ್ಲಿ 25 ಮೀಟರ್ ಬಫರ್ ಝೋನ್ನಲ್ಲಿ 5 ಮೀಟರ್ ಕಾಲುವೆ, 8 ಮೀಟರ್ ಸೆಟ್ಬ್ಯಾಕ್ ಇರುತ್ತದೆ. ತೃತೀಯ ಹಂತದ ರಾಜಕಾಲುವೆಯ 15 ಮೀಟರ್ ಬಫರ್ ಝೋನ್ನಲ್ಲಿ 3 ಮೀಟರ್ ಕಾಲುವೆ, 3 ಮೀಟರ್ ಸೆಟ್ಬ್ಯಾಕ್ ಇರುತ್ತದೆ’ ಎಂದು ಬಿ–ಸ್ಮೈಲ್ನ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ಮಾಹಿತಿ ನೀಡಿದರು.

2 ವರ್ಷದಲ್ಲಿ 300 ಕಿ.ಮೀ ರಸ್ತೆ: ಪ್ರಹ್ಲಾದ್

‘ನಗರದಲ್ಲಿ ‘ಸಂಚಾರಯುಕ್ತ ಯೋಜನೆ’ ಅಡಿ 300 ಕಿ.ಮೀ ಸರ್ವಿಸ್ ರಸ್ತೆಯನ್ನು ರಾಜಕಾಲುವೆಯ ಬಫರ್ ಝೋನ್ನಲ್ಲಿ ಇನ್ನೆರಡು ವರ್ಷದಲ್ಲಿ ನಿರ್ಮಿಸಲಾಗುತ್ತದೆ. ಈ ಬಗ್ಗೆ ಯೋಜನೆ ರೂಪಿಸಲಾಗಿದೆ. ಬಫರ್ ಝೋನ್ನಲ್ಲಿರುವ ಆಸ್ತಿಗಳಿಗೆ ಟಿಡಿಆರ್ ನೀಡುವುದರಿಂದ ಭೂಸ್ವಾಧೀನದ ವೆಚ್ಚ ಅನ್ವಯವಾಗುವುದಿಲ್ಲ. ಇದಲ್ಲದೆ, ‘ಆಕಾಶ ಗೋಪುರ’ ಯೋಜನೆಯನ್ನು ಬಿಡಿಎಯೇ ತನ್ನ ಸಂಪನ್ಮೂಲದಿಂದ ನಿರ್ಮಿಸಲು, ಆ ಯೋಜನೆಯನ್ನು ಸರ್ಕಾರ ಬಿ–ಸ್ಮೈಲ್ನಿಂದ ಬಿಡಿಎಗೆ ವರ್ಗಾಯಿಸಿದೆ’ ಎಂದು ಬಿ–ಸ್ಮೈಲ್ನ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ತಿಳಿಸಿದರು.

ಎಲ್ಲೆಲ್ಲಿ ರಾಜಕಾಲುವೆ ಸರ್ವಿಸ್ ರಸ್ತೆ?

ಹೊಸಕೆರೆಹಳ್ಳಿ ಕೆರೆಕೋಡಿ ರಸ್ತೆಯಿಂದ ವಿ–ಲೆಗಸಿ ರಸ್ತೆಯಿಂದ ರಾಜರಾಜೇಶ್ವರಿ ನಗರ ಆರ್ಚ್ವರೆಗೆ

10.02 ಕಿ.ಮೀ: ಒಟ್ಟು ಉದ್ದ

₹22.95 ಕೋಟಿ: ಒಟ್ಟು ವೆಚ್ಚ

ಮಾರ್ಗ: ಕೆರೆಕೋಡಿ ರಸ್ತೆಯಿಂದ ರಾಜರಾಜೇಶ್ವರಿ ನಗರ ಆರ್ಚ್; ಕೆರೆಕೋಡಿಯಿಂದ ವಿ–ಲೆಗಸಿ ಮೂಲಕ ರಾಜರಾಜೇಶ್ವರಿ ನಗರ ಆರ್ಚ್; ವಿ–ಲೆಗಸಿ ರಸ್ತೆಯಿಂದ (ನೈಸ್ ರಸ್ತೆ ಸೇತುವೆ) ರಾಜಕಾಲುವೆ ಸೇತುವೆ; ನಾಯಂಡಹಳ್ಳಿ ವೃತ್ತದಿಂದ ವಿ–ಲೆಗಸಿ ರಸ್ತೆ; ಹೊರವರ್ತುಲ ರಸ್ತೆಯಲ್ಲಿರುವ ನಮ್ಮೂರ ತಿಂಡಿಯಿಂದ ಮೈಸೂರು ರಸ್ತೆಯ ವಿಶ್ವವಿದ್ಯಾಲಯದ ಗೇಟ್; ಮೈಸೂರು ರಸ್ತೆಯ ವಿಶ್ವವಿದ್ಯಾಲಯ ಗೇಟ್ನಿಂದ ಪಟ್ಟಣಗೆರೆ ಮುಖ್ಯರಸ್ತೆ; ವಿ–ಲೆಗಸಿ ರಸ್ತೆಯಿಂದ ದರ್ಶನ್ ಫಾರ್ಮ್ ಹೌಸ್; ವಿ–ಲೆಗಸಿ ರಸ್ತೆಯಿಂದ ರಾಜಕಾಲುವೆ ಸೇತುವೆವರೆಗೆ.

ನಾಯಂಡಹಳ್ಳಿ ವೃತ್ತದಿಂದ ವಿ– ಲೆಗಸಿ ರಸ್ತೆವರೆಗೆ

2.60 ಕಿ.ಮೀ: ಒಟ್ಟು ಉದ್ದ

₹11.66 ಕೋಟಿ: ಒಟ್ಟು ವೆಚ್ಚ

ಮಾರ್ಗ: ಹೊರ ವರ್ತುಲ ರಸ್ತೆಯ ವೀರಭದ್ರ ಸಿಗ್ನಲ್ನಿಂದ ಕೆರೆಕೋಡಿ ರಸ್ತೆ ಮೂಲಕ ವಿ– ಲೆಗಸಿ ರಸ್ತೆ; ನೈಸ್ ರಸ್ತೆಯ ಲಿಂಕ್ ರಸ್ತೆಯಿಂದ ಕೆರೆಕೋಡಿ ರಸ್ತೆ; ವಿ–ಲೆಗಸಿ ರಸ್ತೆಯಿಂದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್; ಜವರೇಗೌಡನ ದೊಡ್ಡಿ ಮುಖ್ಯರಸ್ತೆಯಿಂದ ನೈಸ್ ರಸ್ತೆ ಸೇತುವೆ– ಬಂಗಾರಪ್ಪನಗರ ರಸ್ತೆ ಜಂಕ್ಷನ್.

ಧಣಿಸಂದ್ರ ಮುಖ್ಯರಸ್ತೆಯಿಂದ ಹೆಣ್ಣೂರು ಮುಖ್ಯರಸ್ತೆ

15.17 ಕಿ.ಮೀ: ಒಟ್ಟು ಉದ್ದ

₹19.27 ಕೋಟಿ: ಒಟ್ಟು ವೆಚ್ಚ

ಮಾರ್ಗ: ಥಣಿಸಂದ್ರದಿಂದ ಹೆಣ್ಣೂರು ಮುಖ್ಯರಸ್ತೆಯ ಎರಡೂ ಬದಿ; ಹೆಣ್ಣೂರು ಮುಖ್ಯರಸ್ತೆಯಿಂದ ಕಿತ್ತಗನೂರು ಬಿದರಹಳ್ಳಿ ಮುಖ್ಯರಸ್ತೆಯ ಎಡಭಾಗ; ಹೆಣ್ಣೂರು ಮುಖ್ಯರಸ್ತೆಯಿಂದ ಕಿತ್ತಗನೂರು ಬಿದರಹಳ್ಳಿ ಮುಖ್ಯರಸ್ತೆ (ಬಲಭಾಗ) ಮೂಲಕ ಕಲ್ಕರೆ ಕೆರೆ.

ಹೆಬ್ಬಾಳ ಮಿಲಿಟರಿ ಪ್ರದೇಶದಿಂದ (ಸರೋವರ ಲೇಔಟ್) ಥಣಿಸಂದ್ರ ಮುಖ್ಯರಸ್ತೆ

14.02 ಕಿ.ಮೀ: ಒಟ್ಟು ಉದ್ದ

₹21.59 ಕೋಟಿ: ಒಟ್ಟು ವೆಚ್ಚ

ಮಾರ್ಗ: ಸರೋವರ ಲೇಔಟ್ನಿಂದ ಬಳ್ಳಾರಿ ರಸ್ತೆ (ಎಡಬದಿ); ಬಳ್ಳಾರಿ ರಸ್ತೆಯಿಂದ ನಾಲ್ಕನೇ ಮುಖ್ಯರಸ್ತೆ; 4ನೇ ಮುಖ್ಯರಸ್ತೆಯಿಂದ ಕೆಂಪೇಗೌಡ ರಸ್ತೆ (ನಾಗವಾರ ಕೆರೆ ಬಫರ್ಝೋನ್); ಕೆಂಪೇಗೌಡ ರಸ್ತೆಯಿಂದ ಮಾನ್ಯತಾ ಟೆಕ್ಪಾರ್ಕ್; ಮಾನ್ಯತಾ ಟೆಕ್ಪಾರ್ಕ್ನಿಂದ ಮಾನ್ಯತಾ ಗೇಟ್–4 ಮೂಲಕ ಕೆ.ವಿ. ಜಯರಾಂ ರಸ್ತೆ; ಕೆ.ವಿ. ಜಯರಾಂ ರಸ್ತೆಯಿಂದ 60 ಅಡಿ ರೈಲ್ವೆ ಪ್ಯಾರಲಲ್ ರಸ್ತೆ (ಎರಡೂ ಬದಿ); ರೈಲ್ವೆ ಪ್ಯಾರಲಲ್ ರಸ್ತೆಯಿಂದ ಬ್ರೆನ್ ನಾರ್ಥರನ್ ಲೈಟ್ಸ್ ಅಪಾರ್ಟ್ಮೆಂಟ್; ಮಾನ್ಯತಾ ಗೇಟ್–4ರಿಂದ ಕೆಂಪೇಗೌಡ ರಸ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.