ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನೀಡಂ ರೋಟರಿ: ಪದಾಧಿಕಾರಿಗಳ ಪದಗ್ರಹಣ

Last Updated 3 ಆಗಸ್ಟ್ 2021, 23:09 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ‘ರೋಟರಿ ಸಂಸ್ಥೆಯು ನಿಸ್ವಾರ್ಥ ಸೇವೆಯ ಮೂಲಕ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ, ಪ್ರಗತಿಪರವಾದ ಸಮಾಜದ ನಿರ್ಮಾಣಕ್ಕೆ ಬದ್ಧವಾಗಿದೆ’ ಎಂದು ರೋಟರಿ ಬೆಂಗಳೂರು ಜಿಲ್ಲಾ ಸಮಿತಿ ನಿರ್ದೇಶಕ ಕೆ.ಟಿ.ನಿರಂಜನ್ ತಿಳಿಸಿದರು.

ಹೇರೋಹಳ್ಳಿಯಲ್ಲಿ ನಡೆದ ರೋಟರಿ ಬೆಂಗಳೂರು ವಿಶ್ವನೀಡಂ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಶಿಕ್ಷಣ ಪಡೆಯಲು ‍ಪರದಾಡುತ್ತಿದ್ದರು. ಇದನ್ನು ಮನಗಂಡು ಸಂಸ್ಥೆಯುಉಚಿತವಾಗಿ ಟ್ಯಾಬ್ ವಿತರಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ’ ಎಂದರು.

ನಿಯೋಜಿತ ಜಿಲ್ಲಾ ಪಾಲಕ ಜಿತೇಂದ್ರ ಅಣೀಜ,‘ಎಲ್ಲರೂ ಒಗ್ಗೂಡಿ ಸಮಾಜ ಕಟ್ಟುವ ಕೆಲಸ ಮಾಡಬೇಕು. ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಿಗಬೇಕು’ ಎಂದು ಹೇಳಿದರು.

ವಿಶ್ವನೀಡಂ ರೋಟರಿಯ ನೂತನ ಅಧ್ಯಕ್ಷ ಸತೀಶ್,‘ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಗುರುತಿಸಿ, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು’ ಎಂದರು.

ನೂತನ ‍ಪದಾಧಿಕಾರಿಗಳಾಗಿ ಡಿ.ಎಂ.ಮಲ್ಲಿಕಾರ್ಜುನ್ (ಕಾರ್ಯದರ್ಶಿ), ಡಿ.ಕೆ. ಮೂರ್ತಿ (ಖಜಾಂಚಿ), ಓಂಕಾರ್ ಮೂರ್ತಿ (ಉಪಾಧ್ಯಕ್ಷ) ಹಾಗೂ ಶಶಿಧರ್, ಚಂದ್ರಶೇಖರ್, ಮಲ್ಲಿಕಾರ್ಜುನ್, ಪರಮೇಶ್‍ ಗೌಡ, ಭರಣಿ ನಿರಂಜನ್, ಯತೀಂದ್ರ, ರಮಣ, ರವಿಕುಮಾರ್, ಭಾವನಾ ಸತೀಶ್, ಗೀತಾಮಣಿ, ಸುಮ, ಶಶಿಧರ್, ಕವಿತಾ ಓಂಕಾರ್ ಅಧಿಕಾರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT