ಬೆಂಗಳೂರು: ‘ಆತ್ಮಕಥೆಗಳನ್ನು ಬರೆಯುವವರು ತಮ್ಮ ಬದುಕಿನ ಕೆಲವು ಘಟನೆಗಳನ್ನು ಮರೆಮಾಚಿದರೂ, ಸಾಹಿತಿ ಸುಕನ್ಯಾ ಮಾರುತಿ ತಮ್ಮ ಆತ್ಮಕಥೆಯಲ್ಲಿ ನಿರ್ಭೀಡೆಯಿಂದಲೇ ಎಲ್ಲವನ್ನೂ ದಾಖಲಿಸಿದ್ದಾರೆ’ ಎಂದು ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.

ಪದ ಸಂಸ್ಥೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುಕನ್ಯಾ ಮಾರುತಿ ಅವರ ಬದುಕು ಬರಹ, ಸಾಂಸ್ಕೃತಿಕ ಚಿಂತನೆ, ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಆತ್ಮಕಥೆ ಜನಾರ್ಪಣೆಗೊಳಿಸಿ ಮಾತನಾಡಿದರು.

‘ಸುಕನ್ಯಾ ಅವರು ದೇವದಾಸಿಯ ಮಗಳಾಗಿ ಆನಂತರ ನಿರಂತರವಾಗಿ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಶಿಕ್ಷಣ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿ, ಹೋರಾಟಗಳ ಮೂಲಕ ಹಲವರಿಗೆ ಶಕ್ತಿ ತುಂಬುವ ಕೆಲಸ ಮಾಡಿದವರು. ತಳಮಳಗಳನ್ನು ಸಹಿಸಿಕೊಂಡು ಏನೂ ಆಗಿಯೇ ಇಲ್ಲ ಎನ್ನುವ ರೀತಿ ಬೆಳೆದಿದ್ದಾರೆ. ಇದೆಲ್ಲವನ್ನೂ ಆತ್ಮಕಥೆಯಲ್ಲಿ ಸಂಕೋಚವಿಲ್ಲದೇ ಪ್ರಸ್ತಾಪಿಸಿದ್ದಾರೆ. ಆಶ್ಚರ್ಯದ ಜತೆಗೆ ಸಂತೋಷವನ್ನೂ ಉಂಟು ಮಾಡುವ ವಿಶಿಷ್ಟ ಕೃತಿ’ ಎಂದು ತಿಳಿಸಿದರು.

‘ಸ್ತ್ರೀಗೆ ಸಂಪೂರ್ಣ ಸ್ವಾತಂತ್ರ್ಯ ನೀಡದೇ ನಿರ್ಬಂಧಿಸುತ್ತಲೇ ಆಕೆಯನ್ನು ದೇವತೆಗೆ ಹೋಲಿಸುವುದನ್ನು ಮನುಸ್ಮೃತಿಯಲ್ಲಿ ಉಲ್ಲೇಖಿಸಲಾಗಿದೆ. ಹಲವು ನಿರ್ಬಂಧಗಳ ನಡುವೆಯೂ ಸುಕನ್ಯಾ ಮಾರುತಿ ಅವರಂತಹ ಹಲವರು ಗಟ್ಟಿ ನಿಲುವುಗಳಿಂದ ಬದುಕಿನ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ’ ಎಂದರು.

ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ದಂತಗೋಪುರಗಳಲ್ಲಿ ಕುಳಿತು ಸಮಾಜದ ಪರವಾಗಿ ಬರೆಯುವ ಹಲವು ಬರಹಗಾರರು, ಚಿಂತಕರ ನಡುವೆ ಸುಕನ್ಯಾ ಜನರೊಡನೆ ಬೆರೆಯುತ್ತಲೇ ಎಲ್ಲವನ್ನೂ ಗಟ್ಟಿಯಾಗಿ ಹೇಳುತ್ತಾ ಬಂದಿದ್ದಾರೆ. ದಲಿತ, ಬಂಡಾಯ, ಸಮಾಜವಾದಿ ಚಿಂತನೆಗಳು ಪ್ರಬಲಗೊಂಡ ನಂತರ ವಿಭಿನ್ನ ಹಿನ್ನೆಲೆಯವರಿಗೂ ಎಲ್ಲೆಡೆ ಪ್ರಾತಿನಿಧ್ಯ ದೊರೆಯುವ ಸನ್ನಿವೇಶ ನಿರ್ಮಾಣವಾಗಿದೆ’ ಎಂದರು.

‘ಕರ್ನಾಟಕ ವಿಮೋಚನಾ ರಂಗವನ್ನು ಕಟ್ಟಿದಾಗ ಕೆಲವರು ನಮ್ಮೊಂದಿಗೆ ಗುರುತಿಸಿಕೊಳ್ಳಲು ಹಿಂಜರಿದರೂ ಸುಕನ್ಯಾ ಅವರ ಬೆಂಬಲ ದೊರೆತಿತ್ತು. ವೃತ್ತಿ, ಸಾಮಾಜಿಕ ಬದುಕಿನಲ್ಲಿ ಹಲವಾರು ಕೋಟಲೆಗಳನ್ನು ಅನುಭವಿಸುತ್ತಲೇ ಧೃತಿಗೆಡದೇ ಹೋರಾಟಗಳೊಂದಿಗೆ ಗಟ್ಟಿಯಾಗಿ ನಿಂತ ಅವರ ಆತ್ಮಕಥೆಯ ಕುರಿತು ಹೆಚ್ಚು ಚರ್ಚೆಯಾಗಬೇಕು’ ಎಂದು ತಿಳಿಸಿದರು.

ಸಾಹಿತಿ ರಾಜಪ್ಪ ದಳವಾಯಿ, ವಿನಯಾ ಒಕ್ಕುಂದ, ಎನ್.ಕೆ.ಲೋಲಾಕ್ಷಿ, ಸಿದ್ದನಗೌಡ ಪಾಟೀಲ, ಆರ್.ಜಿ.ಹಳ್ಳಿ ನಾಗರಾಜ್, ಮಾವಳ್ಳಿ ಶಂಕರ್, ಬಸವರಾಜ ಸಬರದ ವಿಚಾರ ಮಂಡಿಸಿದರು. ಲೇಖಕಿ ಸುಕನ್ಯಾ ಮಾರುತಿ, ಬರಹಗಾರ ಲತೀಫ್ ಕುನ್ನಿಬಾವಿ, ಪದ ಸಂಸ್ಥೆಯ ದೇವರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.