ಬೆಂಗಳೂರು: ನಗರದಲ್ಲಿ ಕಸ ನಿರ್ವಹಣೆಗಾಗಿ ವಿಧಿಸುವ ಬಳಕೆದಾರರ ಸೇವಾ ಶುಲ್ಕವನ್ನು ಆಸ್ತಿ ತೆರಿಗೆ ಜೊತೆ ಸಂಗ್ರಹಿಸಲು ನಿರ್ಧರಿಸಿದ್ದ ಬಿಬಿಎಂಪಿ, ಅದರ ಬದಲು ವಿದ್ಯುತ್ ಬಿಲ್ ಜೊತೆಗೆ ಸಂಗ್ರಹಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ.

ಈ ಕುರಿತುಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ಇತ್ತೀಚೆಗೆ ಪತ್ರ ಬರೆದಿದ್ದಾರೆ.

‘ಭಾರಿ ಪ್ರಮಾಣದಲ್ಲಿ ಕಸ ಉತ್ಪಾದಿಸುವವರನ್ನು ಹೊರತುಪಡಿಸಿ ಉಳಿದವರು ಉತ್ಪಾದಿಸುವ ಕಸವನ್ನು ಪಾಲಿಕೆಯೇ ನಿರ್ವಹಿಸುತ್ತಿದೆ. ಇದಕ್ಕೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 5 ರಿಂದ ಶೇ 6ರಷ್ಟು ಮಾತ್ರ ಕಸದ ಉಪಕರದ ಮೂಲಕ ಸಂಗ್ರಹವಾಗುತ್ತಿದೆ. ಕಸ ನಿರ್ವಹಣೆಯ ಈ ವೆಚ್ಚದ ವ್ಯತ್ಯಾಸವನ್ನು ಕಸ ನಿರ್ವಹಣೆ ಬಳಕೆದಾರರ ಸೇವಾ ಶುಲ್ಕದ ಮೂಲಕ ಸರಿದೂಗಿಸುವ ಅವಶ್ಯಕತೆ ಇದೆ. 2016ರ ಕಸ ನಿರ್ವಹಣೆ ನಿಯಮಗಳೂ ಕಸ ಉತ್ಪಾದಿಸುವವರೇ ಅದರ ವೆಚ್ಚ ಭರಿಸಬೇಕು ಎಂಬ ತತ್ವವನ್ನು ಪ್ರತಿಪಾದಿಸುತ್ತದೆ. ಬೀದಿ ಗುಡಿಸುವ ಕಾರ್ಯದ ನಿರ್ವಹಣೆಗೆ ವಾರ್ಷಿಕ ₹ 380 ಕೋಟಿ ವೆಚ್ಚವಾಗುತ್ತಿದೆ. ಉಪಕರದ ಮೂಲಕ ಸಂಗ್ರಹವಾಗುವ ₹ 43 ಕೋಟಿಯನ್ನು ಈ ಉದ್ದೇಶಕ್ಕೆ ಬಳಸಲಾಗುತ್ತಿದೆ’ ಎಂದು ಆಯುಕ್ತರು ತಿಳಿಸಿದರು..

2019ರ ಜು. 30ರಂದು ಪಾಲಿಕೆ ಸಭೆಯಲ್ಲಿ ಅಂಗೀಕಾರಗೊಂಡಬಿಬಿಎಂಪಿಯ ಪೌರ ಕಸ ನಿರ್ವಹಣೆ ಉಪನಿಯಮಗಳ ಕುರಿತು ರಾಜ್ಯಪತ್ರದಲ್ಲಿ 2020 ಜೂನ್ 4ರಂದು ಅಧಿಸೂಚನೆ ಪ್ರಕಟವಾಗಿದೆ. ನಿತ್ಯ 100 ಕೆ.ಜಿಗಿಂತ ಕಡಿಮೆ ಕಸ ಉತಾದಿಸುವ ಮನೆಗಳು /ಕಟ್ಟಡ ಸಮುಚ್ಚಯಗಳು ಮತ್ತು 100 ಕೆ.ಜಿ ಗಿಂತ ಕಡಿಮೆ ಕಸ ಉತ್ಪಾದಿಸುವ ಹಾಗೂ 5000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ವಾಣಿಜ್ಯ ಮತ್ತು ಇತರೆ ಕಟ್ಟಡಗಳಿಗೆ ಇದರ ನಿಯಮ 15 ಇ ಮತ್ತು ಜೆಡ್ ಎಫ್ ಪ್ರಕಾರ ಬಳಕೆದಾರರ ಶುಲ್ಕ ನಿಗದಿ ಮಾಡಲಾಗಿದೆ. ಅದರ ಪ್ರಕಾರ ಪ್ರತಿ ಮನೆ ಮತ್ತು ವಾಣಿಜ್ಯ ಕಟ್ಟಡಗಳಿಂದ (ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರನ್ನು ಹೊರತುಪಡಿಸಿ) ಪ್ರತಿ ತಿಂಗಳೂ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಬೇಕಾಗಿರುತ್ತದೆ.

‘ಕಸ ನಿರ್ವಹಣೆಯ ಬಳಕೆದಾರರ ಶುಲ್ಕವನ್ನು ಪಾಲಿಕೆ ವತಿಯಿಂದ ಸಂಗ್ರಹಿಸಲು ಹೆಚ್ಚಿನ ಮಾನವ ಸಂಪನ್ಮೂಲ ಬೇಕಾಗುತ್ತದೆ. ಕಸ ಉತ್ಪಾದಕರು ಶುಲ್ಕ ಪಾವತಿಸದೆ ಇದ್ದಲ್ಲಿ ದಂಡ ವಿಧಿಸಿ, ವಸೂಲು ಮಾಡುವ ವ್ಯವಸ್ಥೆ ಪಾಲಿಕೆಯಲ್ಲಿಲ್ಲ. ಬೆ೦ಗಳೂರು ಎದ್ಯುತ್ ಸರಬರಾಜು ಕ೦ಪನಿ (ಬೆಸ್ಕಾಂ) ಈಗಾಗಲೇ ಪ್ರತಿ ತಿಂಗಳೂ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಂದ ವಿದ್ಯುತ್ ಬಳಕೆದಾರರ ಶುಲ್ಕವನ್ನು ಸಂಗ್ರಹಿಸುತ್ತಿದೆ. ಕಸ ನಿರ್ವಹಣೆಯ ಬಳಕೆದಾರರ ಶುಲ್ಕವನ್ನೂ ಇದರ ಜೊತೆಗೇ ಸಂಗ್ರಹಿಸುವುದು ಸೂಕ್ತ’ ಎಂದು ಬಿಬಿಎಂಪಿ ಆಯುಕ್ತರು ಸಲಹೆ ನೀಡಿದ್ದಾರೆ.

‘ಪಾಲಿಕೆಯಿ೦ದ ಕಸ ಉತ್ಪಾದಕರನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ. ಇದರ ದತ್ತಾಂಶ ಸಂಗ್ರಹದ ಅರ್ಜಿಯ ಜೊತೆಗ ಪ್ರತಿ ಮನೆಗಳ ಮತ್ತು ವಾಣಿಜ್ಯ ಕಟ್ಟಡಗಳಿನ ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆಯನ್ನೂ ಸಂಗ್ರಹಿಸಲಾಗುತ್ತದೆ. ಕಸ ಉತ್ಪಾದಿಸುವವರ ಮ್ಯಾಪಿಂಗ್ ಕುರಿತ ವಿವರವನ್ನು ಬೆಸ್ಕಾಂ ತಂತ್ರಾಂಶದಲ್ಲಿ ಅಡಕಗೊಳಿಸಿ ಕಸ ನಿರ್ವಹಣೆ ಬಳಕೆದಾರರ ಶುಲ್ಕವನ್ನೂ ಸಂಗ್ರಹಿಸಬಹುದು.ಸಂಗ್ರವಾಗುವ ಮೊತ್ತದಲ್ಲಿ ಬೆಸ್ಕಾಂಗೂ ಸೇವಾ ಶುಲ್ಕ ಪಾವತಿಸಲಾಗುತ್ತದೆ’ ಎಂದೂ ಆಯುಕ್ತರು ಪ್ರಸ್ತಾಪಿಸಿದ್ದಾರೆ.

ವಿದ್ಯುತ್ ಮೀಟರ್‌ನ ಆರ್.ಆರ್.ಸಂಖ್ಯೆ ಬಳಸಿ ಕಸ ಬಳಕೆದಾರರ ಶುಲ್ಕ ಸಂಗ್ರಹಿಸುವ ಕುರಿತು ಅಭಿಪ್ರಾಯ ಹಾಗೂ ಅನುಮತಿ ನೀಡಬೇಕು ಎಂದು ಆಯುಕ್ತರು ಪತ್ರದಲ್ಲಿ ಕೋರಿದ್ದಾರೆ.

ಪ್ರತಿವರ್ಷ ಶೇ 5ರಷ್ಟು ಹೆಚ್ಚಳ?

ಬಿಬಿಎಂಪಿ ಕಸ ನಿರ್ವಹಣೆ ಉಪನಿಯಮ 2016ರ ಪ್ರಕಾರ ಕಸ ನಿರ್ವಹಣೆ ಬಳಕೆದಾರರ ಶುಲ್ಕವು ಪ್ರತಿ ವರ್ಷ ಏಪ್ರಿಲ್ 1ರಿಂದ ತನ್ನಿಂದ ತಾನೆ ಶೇ 5ರ ಪ್ರಮಾಣದಲ್ಲಿ ಏರಿಕೆ ಆಗಲಿದೆ. ನಿಗದಿತ ಅವಧಿಯೊಳಗೆ ಶುಲ್ಕ ಪಾವತಿ ಮಾಡದಿದ್ದರೆ ತಿಂಗಳಿಗೆ ಶೇ 2ರಷ್ಟು ಬಡ್ಡಿ ಸೇರಿಸಿ ವಸೂಲಿ ಮಾಡಲು ಹಾಗೂ ಅಗತ್ಯವೆನಿಸಿದರೆ ಸುಸ್ತಿದಾರರಿಗೆ ಕಸ ನಿರ್ವಹಣಾ ಸೇವೆ ರದ್ದುಪಡಿಸುವುದಕ್ಕೂ ನಿಯಮದಲ್ಲಿ ಅವಕಾಶವಿದೆ.

ಸ್ಥಳದಲ್ಲೇ ಸಾವಯವ ಗೊಬ್ಬರ (ಕಾಂಪೋಸ್ಟ್) ತಯಾರಿಸುವ ಕಸ ಉತ್ಪಾದಕರಿಗೆ ಹಾಗೂ ಬಯೋಮೀಥನೈಸೇಷನ್ ಮಾಡುವವರಿಗೆ ಬಳಕೆದಾರರ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ಸಿಗಲಿದೆ.

ಬಳಕೆದಾರರ ಶುಲ್ಕ ಯಾರಿಗೆ ಎಷ್ಟು?

ಪ್ರತಿ ಮನೆಗೆ ₹ 200

ವಸತಿ ಕಟ್ಟಡಗಳಿಗೆ (ಮೇಲ್ಪಾಯದ ವಿಸ್ತೀರ್ಣದ ಆಧಾರದಲ್ಲಿ)

ವಿಸ್ತೀರ್ಣ (ಚ.ಅಡಿ) ಶುಲ್ಕ ₹ ಗಳಲ್ಲಿ(ತಿಂಗಳಿಗೆ)

1000 ದವರೆಗೆ; 10

1001– 3000; 30

3000 ಮೇಲ್ಪಟ್ಟು; 50

ವಾಣಿಜ್ಯ ಕಟ್ಟಡಗಳಿಗೆ

1000ದವರೆಗೆ; 50

1001–5000; 100

5000 ಮೇಲ್ಪಟ್ಟು; 200

ಕೈಗಾರಿಕಾ ಕಟ್ಟಡಗಳಿಗೆ

1001– 5000; 200

5000 ಮೇಲ್ಪಟ್ಟು; 300

ಹೋಟೆಲ್, ಕಲ್ಯಾಣ ಮಂಟಪ, ಆರೋಗ್ಯಸೇವಾ ಸಂಸ್ಥೆ ಕಟ್ಟಡಗಳಿಗೆ

ವಿಸ್ತೀರ್ಣ (ಚ. ಅಡಿ); ಶುಲ್ಕ ₹ ಗಳಲ್ಲಿ

10,000ದವರೆಗೆ; 300

10,000– 50,000; 500

50,000 ಮೇಲ್ಪಟ್ಟು; 600

ವಾಣಿಜ್ಯ ಮತ್ತು ಸಾಂಸ್ಥಿಕ ಉತ್ಪಾದಕರು (ನಿತ್ಯ ಕಸ ಉತ್ಪಾದನೆ ಆಧಾರದಲ್ಲಿ)

ಕಸದ ತೂಕ (ಕೆ.ಜಿ.ಗಳಲ್ಲಿ); ಶುಲ್ಕ (₹ಗಳಲ್ಲಿ)

5ಕ್ಕಿಂತ ಕಡಿಮೆ; 500

5–10; 1,400

10–25; 3,500

25–50; 7,000

50–100; 14,000

ಖಾಲಿ ನಿವೇಶನಕ್ಕೆ; ಪ್ರತಿ ಚ.ಅಡಿಗೆ ₹ 0.20

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.