ಸೋಮವಾರ, ಸೆಪ್ಟೆಂಬರ್ 16, 2019
27 °C

ಟ್ಯಾಗೋರ್‌ ಪ್ರಶಸ್ತಿ–ಆಹ್ವಾನ

Published:
Updated:

ಬೆಂಗಳೂರು: ಕೇಂದ್ರ ಸರ್ಕಾರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯವು ಸಾಂಸ್ಕೃತಿಕ ಸಾಮರಸ್ಯಕ್ಕೆ ‘ಟ್ಯಾಗೋರ್‌ ಪ್ರಶಸ್ತಿ’ ನೀಡಲಿದ್ದು, ರಾಜ್ಯದಿಂದ ನಾಮನಿರ್ದೇಶನ ಕಳುಹಿಸಿಕೊಡಲು ರಾಜ್ಯಪಾಲರು ಸೂಚಿಸಿದ್ದಾರೆ.

ರವೀಂದ್ರನಾಥ ಟ್ಯಾಗೂರ್ ಅವರ 150ನೇ ಜನ್ಮದಿನೋತ್ಸವದ ಅಂಗವಾಗಿ 2012ರಲ್ಲಿ ಕೇಂದ್ರ ಸರ್ಕಾರದಿಂದ ಈ ಪ್ರಶಸ್ತಿ ಸ್ಥಾಪಿತವಾಗಿದೆ. ₹ 1 ಕೋಟಿ ನಗದು ಹೊಂದಿದೆ.

ಅರ್ಹವ್ಯಕ್ತಿ, ಸಂಘ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿ ಶಿಫಾರಸು ಮಾಡಲು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ರಾಜ್ಯದ ಇತರ ಮೂವರು ವಿಶ್ವವಿದ್ಯಾಲಯಗಳ ಕುಲಪತಿಗಳನ್ನೊಳಗೊಂಡ ಸಮಿತಿಯನ್ನು ರಾಜ್ಯಪಾಲರು ರಚಿಸಿದ್ದಾರೆ.

ಪ್ರಶಸ್ತಿಯ ಸಂಪೂರ್ಣ ವಿವರ www.bangaloreuniversity.ac.in ವೆಬ್‌ಸೈಟ್‌ನಲ್ಲಿದೆ.

ಇದೇ 24ರೊಳಗೆ ಹೆಸರು ಸೂಚಿಸಬೇಕು ಎಂದು ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Post Comments (+)