ಬೆಂಗಳೂರು: ‘ಟಾಟಾ ಪ್ರಾಜೆಕ್ಟ್’ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ₹ 3.93 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೀಡಾಗಿರುವ ಯಲಹಂಕದ ನಿವಾಸಿಯೊಬ್ಬರು ದೂರು ನೀಡಿದ್ದಾರೆ.

‘ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ದೂರುದಾರ, ಆನ್ಲೈನ್ ಜಾಲತಾಣವೊಂದರಲ್ಲಿ ರಿಸ್ಯುಮೆ ಅಪ್ಲೋಡ್ ಮಾಡಿದ್ದರು. ಅದರಲ್ಲಿರುವ ಮಾಹಿತಿ ತಿಳಿದುಕೊಂಡು ಕರೆ ಮಾಡಿದ್ದ ಆರೋಪಿಗಳು, ’ಟಾಟಾ ಪ್ರಾಜೆಕ್ಟ್' ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕ ಹುದ್ದೆ ಖಾಲಿ ಇದ್ದು, ಅದಕ್ಕೆ ನೀವು ಆಯ್ಕೆಯಾಗಿದ್ದಿರಾ’ ಎಂಬುದಾಗಿ ಹೇಳಿ ನಂಬಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹುದ್ದೆಯ ಅರ್ಜಿ, ಸಂದರ್ಶನ ಹಾಗೂ ಇತರೆ ಪ್ರಕ್ರಿಯೆಗಳಿಗೆ ಶುಲ್ಕ ಪಾವತಿಸಬೇಕೆಂದು ಆರೋಪಿಗಳು ಹೇಳಿದ್ದರು. ಅದನ್ನು ನಂಬಿದ್ದ ದೂರುದಾರ, ಹಂತ ಹಂತವಾಗಿ ₹ 3.93 ಲಕ್ಷ ಕಳುಹಿಸಿದ್ದ. ಅದಾದ ನಂತರ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.