ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಕಲಿಕೆಯ ಸುಲಭ ಸಾಧನ ‘ಕ–ನಾದ’

Last Updated 19 ನವೆಂಬರ್ 2019, 2:12 IST
ಅಕ್ಷರ ಗಾತ್ರ

ಬೆಂಗಳೂರು:ಭಾಷಾ ಕಲಿಕೆಯಲ್ಲಿ ಹೊಸ ಅನುಭವ ನೀಡುವ, ನೂತನ ತಂತ್ರಜ್ಞಾನ ಅಳವಡಿಸಿಕೊಂಡಿರುವ ‘ಕ–ನಾದ’ ಕೀಲಿಮಣೆಯನ್ನು ಕನಾದ ಫೋನೆಟಿಕ್ಸ್‌ ಕಂಪನಿ ಅಭಿವೃದ್ಧಿ ಪಡಿಸಿದೆ.

ನಾವು ಮಾತನಾಡಿದಂತೆಯೇ ಈ ಕೀಲಿಮಣೆಯಲ್ಲಿ ಕನ್ನಡದಲ್ಲಿ ಟೈಪಿಸಿದರೆ, ಭಾರತೀಯ ಭಾಷೆಗಳ ಸಾಲುಗಳು ಪರದೆಯ ಮೇಲೆ ಮೂಡುತ್ತವೆ. ಸಂಸ್ಕೃತ, ತೆಲುಗು ಸೇರಿದಂತೆ ಯಾವುದೇ ಭಾಷೆಯನ್ನು ಕನ್ನಡದ ಮೂಲಕ ಕಲಿಯಬಹುದಾದ ತಂತ್ರಾಂಶವನ್ನು ಇದರಲ್ಲಿ ಅಳವಡಿಸಲಾಗಿದೆ.

ಭಾರತೀಯ ಭಾಷೆಗಳ ಜೊತೆಗೆ ಇಂಗ್ಲಿಷ್‌ ವರ್ಣಾಕ್ಷರಗಳ ಸಂಯೋಜನೆಗೆ ಇದರಲ್ಲಿ ಅವಕಾಶವಿದೆ. ಕೀಲಿಮಣೆಯ ವರ್ಣಾಕ್ಷರ ವಿನ್ಯಾಸವು ಬ್ರಾಹ್ಮೀ ಭಾಷೆಗೆ ಅನುಗುಣವಾದ ಸ್ವರ–ವ್ಯಂಜನ ವಿಭಾಗವನ್ನು ಅನುಸರಿಸಿ ಮಾಡಲಾಗಿರುವುದರಿಂದ ಸರಳ ಹಾಗೂ ಸಹಜವಾಗಿ ಅನ್ಯ ಭಾಷೆಯನ್ನು ಕಲಿಯಬಹುದಾಗಿದೆ.

‘ಶಾಲೆಯಲ್ಲಿ ಭಾಷಾ ಬೋಧಕರಿಗೆ ಮತ್ತು ಮನೆಯಲ್ಲಿ ಭಾಷೆಗಳ ಪ್ರಥಮ ಕಲಿಕೆಗೆ ಇದು ಸುಲಭ ಸಾಧನವಾಗಿದ್ದು, ವಿಂಡೋಸ್‌, ಲಿನಕ್ಸ್‌ ಮತ್ತು ಆಂಡ್ರಾಯ್ಡ್‌ ವ್ಯವಸ್ಥೆಯಲ್ಲಿ ಬಳಸಬಹುದಾಗಿದೆ’ ಎಂದು ಕನಾದ ಕಂಪನಿಯ ಮುಖ್ಯ ಸಂಶೋಧನಾ ಅಧಿಕಾರಿ ಗುರುಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT