ಗುತ್ತಿಗೆದಾರರ ಒಟ್ಟಾರೆ ಆದಾಯವನ್ನು ಐದು ವರ್ಷದಿಂದ ಏಳು ವರ್ಷಗಳಿಗೆ ಹೆಚ್ಚಿಸಲಾಗಿದ್ದು, ಗುತ್ತಿಗೆ ಅವಧಿಯನ್ನು 10 ವರ್ಷಕ್ಕೆ ನಿಗದಿಪಡಿಸಲಾಗಿದೆ. ಡಿ.16ರಂದು ಟೆಂಡರ್ ಸಲ್ಲಿಸಲು ಅಂತಿಮ ದಿನವಾಗಿದ್ದು, 17ರಂದು ಟೆಕ್ನಿಕಲ್ ಬಿಡ್ ನಡೆಯಲಿದೆ. ಕೋವಿಡ್ನಿಂದ ವರಮಾನದ ಮೊತ್ತವನ್ನು ಬಹುತೇಕ ಗುತ್ತಿಗೆದಾರರು ಹೊಂದಿರಲಿಲ್ಲ. ಹೀಗಾಗಿ ಅದನ್ನು ಏಳು ವರ್ಷಕ್ಕೆ ಏರಿಸಲಾಗಿದೆ. ಇನ್ನು ಕೆಲವು ತಾಂತ್ರಿಕ ಮಟ್ಟವನ್ನು ಸಡಿಲಗೊಳಿಸಲಾಗಿದೆ. ರಸ್ತೆಗಳು ಮಾತ್ರ ಹಿಂದಿನಂತೆಯೇ 723 ಇರಲಿದ್ದು ಶುಲ್ಕ ಅದೇ ರೀತಿ ಇರಲಿದೆ ಎಂದುಬಿಬಿಎಂಪಿ ಟ್ರಾಫಿಕ್ ಎಂಜಿನಿಯರಿಂಗ್ ಕೋಶದ (ಟಿಇಸಿ) ಎಂಜಿನಿಯರ್ಗಳು ಮಾಹಿತಿ ನೀಡಿದರು.