ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ನಿಗಮ, ಮಂಡಳಿ ಪಟ್ಟಿ ಅಂತಿಮಗೊಳಿಸಿದ ರಾಜ್ಯ ಸರ್ಕಾರ

Published 29 ಫೆಬ್ರುವರಿ 2024, 11:08 IST
Last Updated 29 ಫೆಬ್ರುವರಿ 2024, 11:08 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಗೆ ಮುನ್ನವೇ ಪಕ್ಷದ ಕಾರ್ಯಕರ್ತರನ್ನು ವಿವಿಧ ನಿಗಮ–ಮಂಡಳಿ, ಅಕಾಡೆಮಿ, ಆಯೋಗಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನೇಮಕ ಮಾಡಲಾಗಿದೆ.

ವಿಧಾನಸಭೆ ಚುನಾವಣೆ ವೇಳೆ ಅನೇಕ ಕ್ಷೇತ್ರಗಳಲ್ಲಿ ಹಲವು ಆಕಾಂಕ್ಷಿಗಳಿದ್ದರು. ಆ ಪೈಕಿ ಗೆಲ್ಲುವವರು ಹಲವರಿದ್ದರು. ಯಾರದ್ದೋ ಒತ್ತಡ, ಪ್ರಭಾವಗಳಿಂದ ಕೆಲವರಿಗೆ ಟಿಕೆಟ್ ಕೈತಪ್ಪಿತ್ತು. ಟಿಕೆಟ್‌ ಕೈತಪ್ಪಿದ ಕೆಲವರಿಗೆ ನಿಗಮ–ಮಂಡಳಿಯಲ್ಲಿ ಅವಕಾಶ ಕಲ್ಪಿಸುವುದಾಗಿ ಪಕ್ಷದ ನಾಯಕರು ಭರವಸೆ ನೀಡಿದ್ದರು. ಅವರಿಗೆ ಈಗ ಅವಕಾಶ ಲಭಿಸಿದೆ.

ಮೈಲ್ಯಾಕ್ (ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ) ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗಿದ್ದ ಅಯೂಬ್‌ ಖಾನ್‌, ತಮಗೆ ನೀಡಿದ್ದ ಸ್ಥಾನದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಅವರನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ (ಕೆಇಎ) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಹೇಳಲಾಗಿದೆ. 

ವಿಧಾನಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಶ್ರೀನಿವಾಸ್ ಹಾಗೂ ಸೋಮಣ್ಣ ಬೇವಿನಮರದ ಅವರಿಗೂ ಅಧ್ಯಕ್ಷ ಸ್ಥಾನ ನೀಡಲಾಗಿದೆ. 

ಬಹುತೇಕ ಕಾರ್ಯಕರ್ತರಿಗೆ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳ (ಕಾಡಾ) ಅಧ್ಯಕ್ಷ ಸ್ಥಾನಗಳನ್ನು ನೀಡಲಾಗಿದೆ.

ನೇಮಕಗೊಂಡವರ ಪಟ್ಟಿ ಈ ಕೆಳಗಿನಂತಿದೆ....

  1. ಕಾಂತಾ ನಾಯ್ಕ - ಕೌಶಲ್ಯಾಭಿವೃದ್ಧಿ ನಿಗಮ ಅಧ್ಯಕ್ಷೆ

  2. ಮುಂಡರಗಿ ನಾಗರಾಜು - ಬಾಬು ಜಗಜೀವನ್​ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ

  3. ವಿನೋದ್ ಕೆ. ಅಸೂಟಿ - ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ

  4. ಬಿ.ಹೆಚ್​.ಹರೀಶ್ - ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷ

  5. ಡಾ.ಅಂಶುಮಂತ್​ - ಭದ್ರಾ ಕಾಡಾ ಅಧ್ಯಕ್ಷ

  6. ಜೆ.ಎಸ್​.ಆಂಜನೇಯಲು - ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

  7. ಡಾ.ಬಿ.ಯೋಗೇಶ್ ಬಾಬು - ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ

  8. ಮರೀಗೌಡ ಯಾದಗಿರಿ - ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ

  9. ದೇವೇಂದ್ರಪ್ಪ ವರ್ತೂರು - ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷ

  10. ರಾಜಶೇಖರ್ ರಾಮಸ್ವರಂ - ಕರ್ನಾಟಕ ಜೈವಿಕ ಇಂಧನ ಮಂಡಳಿ ಅಧ್ಯಕ್ಷ

  11. ಕೆ.ಮರೀಗೌಡ - ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

  12. ಎಸ್​.ಮನೋಹರ್ - ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್

  13. ಅಯೂಬ್ ಖಾನ್ - ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ

  14. ಮಮತಾ ಗಟ್ಟಿ - ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ

  15. ಜಿ.ಪಲ್ಲವಿ - ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ

  16. ಹೆಚ್.ಸಿ.ಸುಧೀಂದ್ರ - ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ

  17. ಡಾ ನಾಗಲಕ್ಷ್ಮಿ ಚೌಧರಿ– ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

  18. ಹೆಚ್‌ ಎಸ್‌ ಸುಂದರೇಶ್‌ – ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

  19. ಆರ್‌.ಎಂ ಮಂಜುನಾಥ -ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರು

  20. ಜಯಣ್ಣ- ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ

  21. ಆರ್.‌ ಸಂಪತ್ ರಾಜ್- ಡಾ. ಬಿ ಆರ್‌ ಅಂಬೇಡ್ಕರ್‌ ಅಭಿವೃದ್ದಿ ನಿಗಮ

  22. ಪದ್ಮಾವತಿ- ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷರು

  23. ಶ್ರೀನಿವಾಸ್‌ - ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

  24. ಶಾಕಿರ್‌ ಸನದಿ- ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು

  25. ಸೋಮಣ್ಣ ಬೇವಿನಮರದ - ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು

  26. ಮೆಹಬೂಬ್‌ ಪಾಷಾ- ಕಂಠೀರವ ಸ್ಟುಡಿಯೋ ಅಧ್ಯಕ್ಷರು

  27. ಕೀರ್ತಿ ಗಣೇಶ್-‌ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷರು

  28. ಮಜರ್‌ ಖಾನ್-‌ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಅಧ್ಯಕ್ಷರು

  29. ಸವಿತಾ ರಘು- ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು

  30. ಲಲಿತ್‌ ರಾಘವ್-‌ ಕರ್ನಾಟಕ ವಿದ್ಯುತ್‌ ಕಾರ್ಖಾನೆ ಅಧ್ಯಕ್ಷ

  31. ಜಿ ಎಸ್‌ ಮಂಜುನಾಥ -ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಅಧ್ಯಕ್ಷರು

  32. ಮಾಲಾ ನಾರಾಯಣರಾವ್-‌ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರು

  33. ರಿಜ್ವಾನ್‌ - ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಮಗದ ಅಧ್ಯಕ್ಷರು

  34. ಕೇಶವ ರೆಡ್ಡಿ- ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು

  35. ತಾಜ್‌ ಪೀರ್-‌ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು

  36. ಗಂಗಾಧರ್-‌ ಮೈಸೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷರು

  37. ಅಲ್ತಾಫ್-‌ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಧ್ಯಕ್ಷರು

  38. ಜಯಸಿಂಹ - ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ

  39. ವಿಜಯ್ ಕೆ.ಮುಳುಗುಂದ್ - ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ

  40. ಮರಿಸ್ವಾಮಿ ಚಾಮರಾಜನಗರ - ಕಾಡಾ ಅಧ್ಯಕ್ಷ

  41. ಸದಾಶಿವ ಉಲ್ಲಾಳ್ - ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

  42. ರಘುನಂದನ್ ರಾಮಣ್ಣ - ಬಿಎಂಐಸಿಎಪಿಎ ಅಧ್ಯಕ್ಷ

  43. ಬಸವರಾಜ್ ಜಾಬಶೆಟ್ಟಿ - ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

  44. ಸಾಧು ಕೋಕಿಲ - ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT