ಬೆಂಗಳೂರು: ‘ನಮ್ಮ ಮೆಟ್ರೊ’ ಹಳದಿ ಮಾರ್ಗದಲ್ಲಿನ ಸಂಚಾರಕ್ಕಾಗಿ ಕೋಲ್ಕತ್ತದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್ (ಟಿಆರ್ಎಸ್ಎಲ್) ಕಾರ್ಯಾಗಾರದಿಂದ ತರಲಾದ ಚಾಲಕ ರಹಿತ ಮೆಟ್ರೊ ರೈಲಿನ ಒಂದು ಸೆಟ್ ಬೋಗಿಗಳು ಹೆಬ್ಬಗೋಡಿ ಡಿಪೊಗೆ ಭಾನುವಾರ ತಲುಪಿವೆ.

ಮೆಟ್ರೊ ಹಳದಿ ಮಾರ್ಗದ ಆರ್.ವಿ ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರವರೆಗಿನ ನೂತನ ಮಾರ್ಗದಲ್ಲಿ ಚಾಲಕರಹಿತ ಮೆಟ್ರೊ ರೈಲು ಸಂಚರಿಸಲಿದೆ. ಹಳದಿ ಮಾರ್ಗಕ್ಕೆ ಮೊದಲ ರೈಲು ಚೀನಾದಿಂದ ಬಂದಿತ್ತು. ಇದೀಗ ಎರಡನೇ ರೈಲು ಟಿಆರ್ಎಸ್ಎಲ್ನಿಂದ ಬಂದಿದೆ.

ಹಳದಿ ಮಾರ್ಗದಲ್ಲಿ ಕೊನೇ ಹಂತದ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಲಾಗುವುದು. ಮಾರ್ಚ್ ಮೊದಲ ವಾರದಲ್ಲಿ ಇತರ ಪರೀಕ್ಷೆಗಳು ನಡೆಯಲಿವೆ. ಮೂರನೇ ರೈಲು ಮಾರ್ಚ್ ಅಂತ್ಯದ ಒಳಗೆ ಬರಲಿದ್ದು, ಆ ಬಳಿಕ ಸಂಚಾರ ಆರಂಭಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಹಳದಿ ಮಾರ್ಗವು ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೊಸಿಸ್ ಫೌಂಡೇಷನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ. ರಸ್ತೆ ನಿಲ್ದಾಣಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.