ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಂಧ ಮರ ಕಳವು: ಐವರ ಬಂಧನ

Last Updated 1 ಮೇ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾದಹಳ್ಳಿ ಬಳಿಯ ಹಾಲಿವುಡ್ ಟೌನ್ ಬಡಾವಣೆಯಲ್ಲಿ ಶ್ರೀಗಂಧದ ಮರ ಕಳವು ಮಾಡಿದ್ದ ಆರೋಪದಡಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

‘ತುಮಕೂರು ಶಿರಾದ ವೆಂಕಟೇಶ್ ಅಲಿಯಾಸ್ ಬಿಸ್ಕೆಟ್ (21), ನೆಲಮಂಗಲದ ವೆಂಕಟೇಶ್ ಅಲಿಯಾಸ್ ಸಣ್ಣಿ (28), ಶಿಡ್ಲಘಟ್ಟದ ಅನಿಲ್‌ಕುಮಾರ್ (42), ಆಂಧ್ರಪ್ರದೇಶದ ವೆಂಕಟರಮಣ (42) ಹಾಗೂ ಕೃಷ್ಣಮೂರ್ತಿ (40) ಬಂಧಿತರು. ಇವರಿಂದ 40 ಕೆ.ಜಿ ತೂಕದ ಶ್ರೀಗಂಧ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಫೆಬ್ರುವರಿ 9ರಂದು ರಾತ್ರಿ ಬಡಾವಣೆಗೆ ನುಗ್ಗಿದ್ದ ಆರೋಪಿಗಳು, ಆಧುನಿಕ ಸಲಕರಣೆ ಹಾಗೂ ಕೊಡಲಿ ಬಳಸಿ ಮರ ಕಡಿದಿದ್ದರು. ನಂತರ, ಮರದ ತುಂಡುಗಳನ್ನು ವಾಹನದಲ್ಲಿ ಸಾಗಿಸಿದ್ದರು. ಈ ಬಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT