ಬೆಂಗಳೂರು: ಜೆ.ಪಿ.ನಗರದ ಬಿಸಿನೆಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಲ್ಯಾಪ್ಟಾಪ್ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು
ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.

ಭರತ್, ವಿಶ್ವನಾಥ್, ಯಶ್ವಂತ್, ಸಂದೀಪ್, ನಾಗೇಂದ್ರ, ಪ್ರಸಾದ್ ಅವರನ್ನು ಬಂಧಿಸಿ, ₹ 2.40 ಲಕ್ಷ ಮೌಲ್ಯದ ಐದು ಲ್ಯಾಪ್ಟಾಪ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿ
ಕೊಂಡಿದ್ದಾರೆ.

ಆರೋಪಿಗಳು ನವೆಂಬರ್ 13ರಂದು ಕಂಪನಿಯ ಹಿಂದಿನ ಬಾಗಿಲ ಚಿಲಕ ಮುರಿದು ಐದು ಲ್ಯಾಪ್ಟಾಪ್ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕನಕಪುರ ರಸ್ತೆಯ ರಘುವನಹಳ್ಳಿಯ ಮನೆಯಲ್ಲಿ ಆರು ಮಂದಿಯನ್ನು ಬಂಧಿಸಿದರು.

ಬಂಧಿತರಿಂದ ಐದು ಲ್ಯಾಪ್ಟಾಪ್, ಎರಡು ಲ್ಯಾಪ್ಟಾಪ್ ಬ್ಯಾಗ್, ಚಾರ್ಜರ್, ಕಂಪನಿಯ ಕೆಲವು ದಾಖಲಾತಿಗಳು, ಫೆಡರಲ್ ಬ್ಯಾಂಕ್ನ ಖಾತೆಯ ಖಾಲಿ ಚೆಕ್ಗಳು, ಡಿವಿಆರ್ ಮತ್ತು ಇತರೆ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ .

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.