ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಉಲ್ಲಂಘನೆ | 9 ತಿಂಗಳಲ್ಲಿ 68.31 ಲಕ್ಷ ಪ್ರಕರಣ, ₹ 173.16 ಕೋಟಿ ದಂಡ

ಸಂಚಾರ ನಿಯಮ ಉಲ್ಲಂಘನೆ: ದ್ವಿಚಕ್ರ ವಾಹನ ಸವಾರರ ವಿರುದ್ಧ ಹೆಚ್ಚು ಪ್ರಕರಣ
Published 26 ಅಕ್ಟೋಬರ್ 2023, 19:52 IST
Last Updated 26 ಅಕ್ಟೋಬರ್ 2023, 19:52 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟಂತೆ 2023ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ 68.31 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಒಟ್ಟು ₹ 173.16 ಕೋಟಿ ದಂಡ ವಿಧಿಸಲಾಗಿದೆ.

ನಗರದ ಬಹುತೇಕ ವೃತ್ತಗಳು ಹಾಗೂ ರಸ್ತೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅವುಗಳು ತೆಗೆಯುವ ಫೋಟೊ ಆಧರಿಸಿ ದಂಡ ವಿಧಿಸಲಾಗುತ್ತಿದೆ. ಜೊತೆಗೆ, ಪೊಲೀಸರೂ ತಮ್ಮ ಕ್ಯಾಮೆರಾಗಳಲ್ಲಿ ಫೋಟೊ ಕ್ಲಿಕ್ಕಿಸಿ ದಂಡ ಹಾಕುತ್ತಿದ್ದಾರೆ. ಇತ್ತೀಚೆಗೆ ದಂಡ ಪಾವತಿಗೆ ಸಂಬಂಧಿಸಿ ಶೇ 50ರಷ್ಟು ರಿಯಾಯಿತಿ ಘೋಷಿಸಲಾಗಿತ್ತು. ಈ ಸಂದರ್ಭದಲ್ಲೂ ಹಲವರು ದಂಡ ಪಾವತಿಸಿದ್ದಾರೆ.

ನಗರದಲ್ಲಿ ದ್ವಿಚಕ್ರ ವಾಹನಗಳ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ನಿಯಮ ಉಲ್ಲಂಘನೆ ಮಾಡಿದ್ದು, ಅವರ ವಿರುದ್ಧವೇ ಹೆಚ್ಚು ಪ್ರಕರಣಗಳು ದಾಖಲಾಗಿವೆ. 9 ತಿಂಗಳಿನಲ್ಲಿ ದಾಖಲಾದ ಪ್ರಕರಣಗಳ ಅಂಕಿ– ಅಂಶ ಇಲ್ಲಿದೆ.

ನಿಯಮ ಉಲ್ಲಂಘಿಸಿರುವ ಪ್ರಕರಣಗಳು

ಬಿಎಂಟಿಸಿ ಬಸ್‌ ಜಾಗದಲ್ಲಿ ಖಾಸಗಿ ವಾಹನ; 4,479 ಪ್ರಕರಣ

ಬಿಎಂಟಿಸಿ ಬಸ್‌ಗಳನ್ನು ನಿಲ್ಲಿಸಲು ನಿಗದಿಪಡಿಸಲಾಗಿರುವ ನಿಲ್ದಾಣ ಹಾಗೂ ತಂಗುದಾಣದ ಜಾಗದಲ್ಲಿ ಅಕ್ರಮವಾಗಿ ಖಾಸಗಿ ವಾಹನಗಳನ್ನು ನಿಲ್ಲಿಸಿದ್ದಕ್ಕೆ ಸಂಬಂಧಪಟ್ಟಂತೆ 4,479 ದಾಖಲಿಸಲಾಗಿದೆ.

10 ವರ್ಷದ ಪ್ರಕರಣಗಳ ವಿವರ
ಯಾವ ವಾಹನಗಳಿಗೆ ಎಷ್ಟು ದಂಡ?

ನಗರದಲ್ಲಿ ನೋಂದಣಿಯಾಗಿರುವ ವಾಹನಗಳ ಸಂಖ್ಯೆ (31–03–2023ರ ಮಾಹಿತಿ)

ವಾಹನ ಬಗೆ; ಒಟ್ಟು ವಾಹನಗಳು

ದ್ವಿಚಕ್ರ ವಾಹನಗಳು; 73.32 ಲಕ್ಷ

ಲಘು ವಾಹನಗಳು; 22.33 ಲಕ್ಷ

ಆಟೊಗಳು; 3 ಲಕ್ಷ

ಭಾರಿ ಸಾರಿಗೆ ವಾಹನಗಳು; 2 ಲಕ್ಷ

ಭಾರಿ ಸರಕು ವಾಹನಗಳು; 2 ಲಕ್ಷ

ಇತರೆ; 5.74 ಲಕ್ಷ

3706: 2023ರ ಜನವರಿ–ಸೆಪ್ಟೆಂಬರ್‌ನವರೆಗಿನ ಅಪಘಾತ ಪ್ರಕರಣ

651: ಮೃತರು

3,155: ಗಾಯಗೊಂಡವರು

ವಾಹನ ಮೇಲಿನ ದಂಡ ತಿಳಿಯಿರಿ

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟಂತೆ ವಾಹನಗಳ ಮೇಲೆ ದಾಖಲಿಸಿರುವ ಪ್ರಕರಣ ಹಾಗೂ ದಂಡದ ಮಾಹಿತಿ ತಿಳಿಯಲು ಆನ್‌ಲೈನ್‌ ವ್ಯವಸ್ಥೆ ಇದೆ.

https://btp.gov.in/’ ಜಾಲತಾಣದಲ್ಲಿ ‘ನಿಮ್ಮ ದಂಡವನ್ನು ಪಾವತಿಸಿ’ ಆಯ್ಕೆಯಲ್ಲಿರುವ ‘ವಾಹನ ಸಂಖ್ಯೆಯ ಮೂಲಕ ಹುಡುಕಾಟ ಮತ್ತು ಪಾವತಿಸುವ ಉಲ್ಲಂಘನೆ’ ಕ್ಲಿಕ್ ಮಾಡಬೇಕು. ನಂತರ, ಕರ್ನಾಟಕ ಒನ್ ಲಿಂಕ್ ತೆರೆದುಕೊಳ್ಳುತ್ತದೆ. ಇದರಲ್ಲಿ ವಾಹನಗಳ ನೋಂದಣಿ ಸಂಖ್ಯೆ ನಮೂದಿಸಿದರೆ, ಪ್ರಕರಣ ಹಾಗೂ ದಂಡದ ವಿವರ ಲಭ್ಯವಾಗುತ್ತದೆ. ಆನ್‌ಲೈನ್ ಮೂಲಕ ದಂಡ ಪಾವತಿಗೂ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT