ಬೆಂಗಳೂರು: ಎಂಜಿನಿಯರಿಂಗ್ ಕೆಲಸ ಹಮ್ಮಿಕೊಂಡಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಹೊರಡುವ ನಾಲ್ಕು ರೈಲುಗಳು ನಿಗಿದಿತ ಸಮಯಕ್ಕಿಂತ 15 ನಿಮಿಷ ತಡವಾಗಿ ಸಂಚರಿಸಲಿವೆ.
ಮಹಾರಾಷ್ಟ್ರದ ಭೂಸಾವಲ್ ವಿಭಾಗದಲ್ಲಿ ಪವರ್ ಬ್ಲಾಕ್ ಅಳವಡಿಕೆ ನಡೆಯಲಿರುವುದರಿಂದ ಸೆ.5ರಂದು ಮೈಸೂರು–ವಾರಾಣಸಿ ರೈಲು, ಸೆ.6 ಮತ್ತು 13ರಂದು ಹುಬ್ಬಳ್ಳಿ–ಬನಾರಸ್ ರೈಲು, ಸೆ.13ರಂದು ನವದೆಹಲಿ–ಕೆಎಸ್‌ಆರ್ ಬೆಂಗಳೂರು ರೈಲುಗಳು ತಲಾ 15 ನಿಮಿಷ ತಡವಾಗಿ ಸಂಚರಿಸಲಿವೆ.
ಕಾಮಗಾರಿಗಾಗಿ ಭುವನೇಶ್ವರ ನಿಲ್ದಾಣದಲ್ಲಿ ನಿರ್ಬಂಧ ಇರುವ ಕಾರಣ ನಿಲ್ದಾಣ ಬೆಂಗಳೂರು ಎಸ್‌ಎಂವಿಟಿ–ಭುವನೇಶ್ವರ ಸೂಪರ್‌ಫಾಸ್ಟ್ ರೈಲು ಸೆ.2 ಮತ್ತು 5 ರಂದು 15 ನಿಮಿಷ ತಡವಾಗಿ ಸಂಚರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.