ಭಾನುವಾರ, ಆಗಸ್ಟ್ 1, 2021
21 °C

ಎರಡನೇ ದಿನಕ್ಕೆ ವರ್ಗಾವಣೆ ರದ್ದು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಹುದ್ದೆಯಲ್ಲಿದ್ದ ರಂಗಪ್ಪ ಎಸ್‌ (ಕೆಎಎಸ್‌ ಆಯ್ಕೆ ಶ್ರೇಣಿ) ಅವರು ವರ್ಗಾವಣೆಗೊಂಡು ಇನ್ನೇನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಬೇಕು ಎನ್ನುವಷ್ಟರಲ್ಲೇ ವರ್ಗಾವಣೆ ಆದೇಶವೇ ರದ್ದುಗೊಂಡಿದೆ!

ಬಿಡಿಎ ಕಾರ್ಯದರ್ಶಿ ಹುದ್ದೆ ಆಯಕಟ್ಟಿನ ಸ್ಥಾನ ಎಂದೇ ಪರಿಗಣಿಸಲಾಗಿದೆ. ಆ ಹುದ್ದೆಯಲ್ಲಿದ್ದ ಬಿ.ವಿ. ವಾಸಂತಿ ಅಮರ್‌(ಕೆಎಎಸ್‌ ಆಯ್ಕೆ ಶ್ರೇಣಿ) ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಇದೇ 19ರಂದು ವರ್ಗಾವಣೆ ಮಾಡಲಾಗಿತ್ತು.

ಅದೇ ರೀತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಡಿ.ಬಿ. ನಟೇಶ್‌ ಅವರನ್ನು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕರಾಗಿ ವರ್ಗಾವಣೆ ಮಾಡಿದ್ದ ಆದೇಶವನ್ನೂ ರದ್ದುಪಡಿಸಲಾಗಿದೆ. ಹೀಗಾಗಿ,  ಶೀಲವಂತ ಎಂ. ಶಿವಕುಮಾರ್‌ ಅವರು ಜಂಟಿ ನಿರ್ದೇಶಕರಾಗಿ
ಮುಂದುವರಿಯಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು