ಮಂಗಳವಾರ, ಫೆಬ್ರವರಿ 25, 2020
19 °C
ಮೂರು ಪ್ರಯೋಗಾಲಯ ಉದ್ಘಾಟನೆ

ಕೆ.ಆರ್. ಪುರದಲ್ಲಿ ಟ್ರಾಮಾ ಕೇಂದ್ರ ನಿರ್ಮಾಣ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೆ.ಆರ್. ಪುರದಲ್ಲಿ ಟ್ರಾಮಾ ಸೆಂಟರ್‌ ನಿರ್ಮಿಸಲು ಸರ್ಕಾರದಿಂದ ಅಗತ್ಯ ನೆರವು ನೀಡ ಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಭರವಸೆ ನೀಡಿದರು. 

ನಿಮ್ಹಾನ್ಸ್‌ ಸಂಸ್ಥಾಪನಾ ದಿನದ ಅಂಗವಾಗಿ ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು, ‘ನಿಮ್ಹಾನ್ಸ್‌ನಲ್ಲಿ ಮನೋರೋಗಕ್ಕೆ ಸಂಬಂಧಿಸಿದ ಚಿಕಿತ್ಸೆ ಮಾತ್ರ ನೀಡಲಾಗುತ್ತಿದೆ. ಈ ಟ್ರಾಮಾ ಸೆಂಟರ್‌ನಲ್ಲಿ ಅಪಘಾತದಲ್ಲಿ ಗಾಯಗೊಂಡವರು, ತುರ್ತು ಸ್ಥಿತಿಯಲ್ಲಿರುವವರಿಗೂ ಚಿಕಿತ್ಸೆ ನೀಡ ಬಹುದು’ ಎಂದರು.

ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ, ‘ನಿಮ್ಹಾನ್ಸ್‌ ಮೇಲಿನ ಒತ್ತಡ ಕಡಿಮೆ ಮಾಡಲು ಬೆಂಗಳೂರು ಉತ್ತರದಲ್ಲಿ ನಿಮ್ಹಾನ್ಸ್‌ನ ಮತ್ತೊಂದು ಆಸ್ಪತ್ರೆ ನಿರ್ಮಿಸುವ ಉದ್ದೇಶವಿದೆ. ತೀವ್ರ ಮಾನಸಿಕ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಚಿಕಿತ್ಸೆ ಗಾಗಿ ‘ನಮಾಮಿ’ ಆರೋಗ್ಯ ಕೇಂದ್ರ ತೆರೆಯಲಾಗುವುದು’ ಎಂದು ಅವರು ಭರವಸೆ ನೀಡಿದರು. 

ನಿಮ್ಹಾನ್ಸ್‌ ನಿರ್ದೇಶಕ ಡಾ.ಬಿ.ಎನ್. ಗಂಗಾಧರ್,  ‘ನಿಮ್ಹಾನ್ಸ್‌ ನಲ್ಲಿ ಶೀಘ್ರದಲ್ಲಿಯೇ ಅರಿವು ಕೇಂದ್ರ (ಕಾನ್ಷಿಯಸ್‌ ಸೆಂಟರ್) ಮತ್ತು ನಿಮ್ಹಾನ್ಸ್‌ ಡಿಜಿಟಲ್ ಅಕಾಡೆಮಿ ಸ್ಥಾಪಿಸಲಾಗುವುದು’ ಎಂದರು.  

ಇದೇ ಸಂದರ್ಭದಲ್ಲಿ ಮೂರು ಪ್ರಯೋಗಾಲಯಗಳನ್ನು ಉದ್ಘಾಟಿಸಲಾಯಿತು. 

ವಂಶವಾಹಿ ಸೋಂಕು ಪತ್ತೆ ಪ್ರಯೋಗಾ ಲಯ: ಇದರಲ್ಲಿ  ವಂಶವಾಹಿಗೆ ಸಂಬಂಧಿಸಿದ ಸೋಂಕು ಪತ್ತೆಹಚ್ಚ
ಲಾಗುತ್ತದೆ.  ಮುಖ್ಯವಾಗಿ ಏಕ ವಂಶ ವಾಹಿ ಸೋಂಕು ಪತ್ತೆಗೆ ಸಹಾಯಕ, 

ಸ್ವಯಂಚಾಲಿತ ಪ್ರತಿರಕ್ಷಕ ಪ್ರಯೋಗಾಲಯ:  ದೇಹದಲ್ಲಿನ ಪ್ರತಿ ಕಾಯಗಳನ್ನು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆಗೆ ಸೂಚಿಸುವ ಕೆಲಸ ಇಲ್ಲಿ ನಡೆಯಲಿದೆ. ಈ ಪ್ರಯೋಗಾಲಯ ದಲ್ಲಿ ಯಾವ ರೋಗಕ್ಕೆ, ಏನು ಕಾರಣ ಎಂಬುದು ಪತ್ತೆ ಹಚ್ಚಬಹುದು 

ನರ ಸೋಂಕು ಪತ್ತೆ ಪ್ರಯೋಗಾಲಯ:  ಕೇಂದ್ರ ನರವ್ಯೂಹ ವ್ಯವಸ್ಥೆಯಲ್ಲಿ ಕಂಡು ಬರುವ ಅಪರೂಪದ ಸೋಂಕು ಪತ್ತೆ ಹಚ್ಚಲಾಗುತ್ತದೆ. ಜೀವಕೋಶ ಆಧಾರಿತ ಚಿಕಿತ್ಸೆ ನೀಡಲಾಗುತ್ತದೆ.ನರವ್ಯೂಹ ವ್ಯವಸ್ಥೆಯ ಜೀವನಿರೋಧಕ ಶಕ್ತಿ ಪರೀಕ್ಷೆ ಮಾಡಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)