ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳ, ದನಕರುಗಳ, ಸಂತ್ರಸ್ತರ ಶಾಪ ತಟ್ಟಲಿದೆ: ಶಿವರಾಮ ಕಾರಂತರ ಬಡಾವಣೆ ಸಂತ್ರಸ್ತರು

Last Updated 20 ಮಾರ್ಚ್ 2023, 20:09 IST
ಅಕ್ಷರ ಗಾತ್ರ

ಯಲಹಂಕ: ‘ನಮ್ಮ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಮರಗಳ, ದನಕರುಗಳ ಶಾಪ ನಿಮ್ಮನ್ನು ಎಂದಿಗೂ ಸುಮ್ಮನೆ ಬಿಡುವುದಿಲ್ಲ’ ಎಂದು ಉದ್ದೇಶಿತ ಡಾ.ಶಿವರಾಮ ಕಾರಂತರ ಬಡಾವಣೆಗಾಗಿ ಭೂಮಿ ಕಳೆದುಕೊಂಡಿರುವ ಸಂತ್ರಸ್ತರು ಹೇಳಿದರು.

ರಾಮಗೊಂಡನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶಿವರಾಮಕಾರಂತ ಬಡಾವಣೆ ರೈತರ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ರೈತ ಮುಖಂಡ ಮಾವಳ್ಳಿಪುರ ಬಿ.ಶ್ರೀನಿವಾಸ್, ರೈತರ ಜಮೀನು ಮತ್ತು ರೈತರಮೇಲೆ ದಬ್ಬಾಳಿಕೆ ಮಾಡುವ ಅಧಿಕಾರ ಯಾವ ಶಾಸಕಾಂಗಕ್ಕೂ ಇಲ್ಲ ಎಂದರು.

ರೈತ ಮುಖಂಡ ರಾಮಗೊಂಡನಹಳ್ಳಿ ಎಂ.ರಮೇಶ್ ಮಾತನಾಡಿ, ಬಡಾವಣೆಗಾಗಿ ಭೂಮಿಯನ್ನು ಕಳೆದುಕೊಂಡಿರುವ ನಮ್ಮ 17 ಗ್ರಾಮಗಳಲ್ಲಿ ಈಗ ಶೋಕದ ಛಾಯೆ ಆವರಿಸಿದ್ದು, ನಮಗೆ ಯುಗಾದಿ ಹಬ್ಬವಿಲ್ಲ ಎಂದು ಹೇಳಿದರು.

ನಿವೃತ್ತ ಎಸ್.ಪಿ ಎನ್.ಕೃಷ್ಣಪ್ಪ, ಮುಖಂಡರಾದ ಎಂ.ಮುನಿರಾಜು, ಬಸವರಾಜ ಪಾದಯಾತ್ರಿ, ವೀರಸಾಗರ ವಸಂತ್, ಬೆಟ್ಟಹಳ್ಳಿ ಸುರೇಶ್‌ಗೌಡ, ಬ್ಯಾಲಕೆರೆ ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT