ಮಂಗಳವಾರ, ಜೂನ್ 22, 2021
28 °C

ಬಂಡೆಗೆ ಗುದ್ದಿದ ಟ್ರಕ್; ಸ್ಥಳದಲ್ಲೇ ಪ್ರಯಾಣಿಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬಂಡೆಯೊಂದಕ್ಕೆ ಟ್ರಕ್‌ ಗುದ್ದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಚೇತನ್ (20) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ನೈಸ್‌ ರಸ್ತೆಯಲ್ಲಿ ಪಿಳ್ಳಗಾನಹಳ್ಳಿ ಸೇತುವೆ ಬಳಿ ಗುರುವಾರ ನಸುಕಿನಲ್ಲಿ ಈ ಅವಘಡ ಸಂಭವಿಸಿದೆ. ಟ್ರಕ್‌ನಲ್ಲಿದ್ದ ಇನ್ನೊಬ್ಬ ಪ್ರಯಾಣಿಕ ದೂರೇಂದ್ರ ತಪ (24) ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಬನ್ನೇರುಘಟ್ಟ ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ಟ್ರಕ್ (ಕೆಎ 05 ಎಜಿ 0936) ಹೊರಟಿತ್ತು. ಪಿಳ್ಳಗಾನಹಳ್ಳಿ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್, ರಸ್ತೆ ಬದಿಯ ಬಂಡೆಗೆ ಗುದ್ದಿತ್ತು. ಟೆಂಪೊದ ಎಡಭಾಗ ಸಂಪೂರ್ಣ ಜಖಂಗೊಂಡು ಚಾಲಕನ ಪಕ್ಕದ ಆಸನದಲ್ಲಿದ್ದ ಚೇತನ್ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಸ್ಥಳದಲ್ಲೇ ನರಳಾಡಿ ಚೇತನ್ ಮೃತಪಟ್ಟಿದ್ದಾರೆ.’

‘ಕೆ. ಅಂದಾನಿ (28) ಎಂಬಾತ ಟೆಂಪೊ ಚಲಾಯಿಸುತ್ತಿದ್ದ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಪೊಲೀಸತು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.