ಬೆಂಗಳೂರು: ಜೆ.ಸಿ.ರಸ್ತೆಯ ಟ್ರಸ್ಟ್ವೆಲ್ ಆಸ್ಪತ್ರೆಯ 5‘ಜಿ’ ಚಾಲಿತ ಸ್ಮಾರ್ಟ್ ಆಂಬುಲೆನ್ಸ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಬುಧವಾರ ಚಾಲನೆ ನೀಡಿದರು.

ರೋಗಿಯನ್ನು ಆಂಬುಲೆನ್ಸ್ಗೆ ಹತ್ತಿಸಿಕೊಂಡ ಕ್ಷಣದಿಂದ ಆಸ್ಪತ್ರೆಗೆ ದಾಖಲಿಸುವವರೆಗೂ ನಿಗಾ ವಹಿಸುವ ವ್ಯವಸ್ಥೆ ಈ ಆಂಬುಲೆನ್ಸ್ನಲ್ಲಿದೆ. ‘ಗೋಲ್ಡನ್ ಅವರ್’ನಲ್ಲಿ ಪ್ಯಾರಾಮೆಡಿಕಲ್ ಸಿಬ್ಬಂದಿಗೆ ವೈದ್ಯರು ಮಾರ್ಗದರ್ಶನ ನೀಡುವಂತಹ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ ಎಂದು ಅಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

5‘ಜಿ’ ತಂತ್ರಜ್ಞಾನ, ಅತ್ಯಾಧುನಿಕ ಕ್ಯಾಮೆರಾಗಳು, ಸುಧಾರಿತ ಟೆಲಿಮೆಡಿಸಿನ್ ಸಾಧನಗಳಿವೆ. ರೋಗಿಯ ಪ್ರಮುಖ ಆರೋಗ್ಯ ಮಾಹಿತಿಗಳಾದ ಇಸಿಜಿ, ರಕ್ತದೊತ್ತಡ, ಆಮ್ಲಜನಕದ ಮಟ್ಟ ಮತ್ತು ನೇರ ಪ್ರಸಾರದ ವಿಡಿಯೊಗಳನ್ನು ಯಾವುದೇ ಅಡೆತಡೆಯಿಲ್ಲದೆ, ವಿಳಂಬವಿಲ್ಲದೆ ಆಸ್ಪತ್ರೆಯ ತಜ್ಞರಿಗೆ ರವಾನಿಸುತ್ತದೆ. ಈ ವಾಹನವು ‘ಚಲಿಸುವ ತುರ್ತು ಚಿಕಿತ್ಸಾ ಘಟಕ’ದಂತೆ ಕಾರ್ಯನಿರ್ವಹಿಸುತ್ತದೆ. ಸುಧಾರಿತ ಜೀವ ರಕ್ಷಕ ಉಪಕರಣಗಳೂ ವಾಹನದಲ್ಲಿವೆ. ಇದರಿಂದ ವೈದ್ಯಕೀಯ ತಂಡವು ದೂರದಿಂದಲೇ ರೋಗಿಯ ಮೌಲ್ಯಮಾಪನ ಮಾಡಿ, ತಕ್ಷಣ ರೋಗಿಯ ಆರೋಗ್ಯ ಸ್ಥಿತಿ ತಿಳಿದುಕೊಳ್ಳಬಹುದು. ರೋಗಿ ಆಸ್ಪತ್ರೆಗೆ ಬರುವ ಮುನ್ನವೇ ಪ್ರಯೋಗಾಲಯ, ಶಸ್ತ್ರಚಿಕಿತ್ಸಾ ಕೊಠಡಿ ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ಆಂಬುಲೆನ್ಸ್ಗೆ ಚಾಲನೆ ನೀಡಿ ಮಾತನಾಡಿದ ಸಲೀಂ ಅವರು, ‘ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ತುರ್ತು ಸೇವೆ ಬಲಪಡಿಸಲು ಇಂತಹ ತಂತ್ರಜ್ಞಾನ ಆಧಾರಿತ ಆರೋಗ್ಯ ಪರಿಹಾರಗಳು ಅಗತ್ಯ’ ಎಂದು ಹೇಳಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ. ಮಧುಸೂದನ್ ಮಾತನಾಡಿ, ‘5‘ಜಿ’ ಸ್ಮಾರ್ಟ್ ಆಂಬುಲೆನ್ಸ್ ಬರೀ ರೋಗಿಗಳನ್ನು ಕರೆದೊಯ್ಯುವ ವಾಹನ ಅಲ್ಲ. ತುರ್ತು ಚಿಕಿತ್ಸಾ ವಿಭಾಗವೇ ವಾಹನದಲ್ಲಿ ಇದೆ. ಹೃದಯಾಘಾತ, ಪಾರ್ಶ್ವವಾಯು ಅಥವಾ ತೀವ್ರ ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಪ್ರತಿ ಕ್ಷಣವೂ ಅಮೂಲ್ಯ. ಮಾರ್ಗಮಧ್ಯೆಯೇ ಜೀವ ಉಳಿಸುವ ಚಿಕಿತ್ಸೆಗಳಿಗೆ ಮಾರ್ಗದರ್ಶನ ನೀಡಲು, ಆಸ್ಪತ್ರೆಗೆ ತಲುಪಿದ ತಕ್ಷಣವೇ ನಿಖರ ಚಿಕಿತ್ಸೆ ನೀಡಲು ಸಿದ್ಧವಾಗಿರುವುದಕ್ಕೆ ನೆರವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.