ಬೆಂಗಳೂರು: ‘ನಗರದಲ್ಲಿ ವಾಹನ ಸಂಚಾರ ವ್ಯವಸ್ಥೆಯನ್ನು ಹದಗೆಡಿಸುವ ಹಾಗೂ ಪರಿಸರಕ್ಕೆ ಧಕ್ಕೆ ತರುವ ಸುರಂಗ ರಸ್ತೆ ಯೋಜನೆಯನ್ನು ಮರು ಪರಿಶೀಲಿಸಬೇಕು’ ಎಂದು ಸಂಸದ ಪಿ.ಸಿ.ಮೋಹನ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗಿನ 18 ಕಿ.ಮೀ ಉದ್ದ ಸುರಂಗ ರಸ್ತೆಗೆ ₹8,043 ಕೋಟಿ ವೆಚ್ಚ ಮಾಡಲು ಮುಂದಾಗಿದೆ.

‘ಈ ಯೋಜನೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳಿವೆ. ನಗರ ಸಂಚಾರ ಯೋಜನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್) ಸಾಕಷ್ಟು ತಪ್ಪುಗಳಿವೆ. ಮುಂಬೈ ಕೋಸ್ಟಲ್ ರಸ್ತೆ ಯೋಜನೆಯ ವಿವರಗಳನ್ನು ಇದರಲ್ಲಿ ಸೇರಿಸಲಾಗಿದೆ’ ಎಂದಿದ್ದಾರೆ.

‘ನಗರದ ಎಲ್ಲ ಯೋಜನೆಗಳು ನಾಗರಿಕರ ಕೇಂದ್ರೀಕೃತವಾಗಿದ್ದು, ಪಾರದರ್ಶಕತೆ ಮತ್ತು ಹೊಣೆಗಾರಿಕೆ
ಯನ್ನು ಹೊಂದಿರಬೇಕು’ ಎಂದು ಹೇಳಿದ್ದಾರೆ.

ಒಂದು ಪುಟ ಅಷ್ಟೇ:

‘ಸುರಂಗ ರಸ್ತೆಯ ಡಿಪಿಆರ್ ಸಿದ್ಧಪಡಿಸಿರುವ ರೋಡಿಕ್ಸ್ ಸಂಸ್ಥೆ ತಪ್ಪಾಗಿ ಒಂದು ಪುಟ ಸೇರಿಸಿದೆ. ಅದು ಯೋಜನೆಗೆ ಸಂಬಂಧಿಸಿದ್ದಲ್ಲ. ಉಳಿದದ್ದು ಸರಿಯಾಗಿದೆ. ಆದರೂ ಅವರ ತಪ್ಪಿಗೆ ₹5 ಲಕ್ಷ ದಂಡ ವಿಧಿಸಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಸುರಂಗ ರಸ್ತೆಯ ಡಿಪಿಆರ್ ತಯಾರಿಸಲು ಬಿಬಿಎಂಪಿ ₹9.45 ಕೋಟಿ ವೆಚ್ಚ ಮಾಡಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.