ಬುಧವಾರ, ಮೇ 25, 2022
29 °C

‘ತುರಹಳ್ಳಿ ಅರಣ್ಯ ಒತ್ತುವರಿ ತೆರವುಗೊಳಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಹಾನಗರದ ಬಳಿಯಿರುವ ಏಕಮಾತ್ರ ತುರಹಳ್ಳಿ ಅರಣ್ಯವು ನಿರಂತರ ಒತ್ತುವರಿಗೆ ಒಳಗಾಗಿ ನಶಿಸುತ್ತಿದೆ. ಒತ್ತುವರಿ ತೆರವುಗೊಳಿಸಿ ಅರಣ್ಯವನ್ನು ಸಂರಕ್ಷಿಸಬೇಕು’ ಎಂದು ಸಿಪಿಎಂ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

‘ಹಲವು ದೈತ್ಯ ಬಿಲ್ಡರ್‌ಗಳು ತುರಹಳ್ಳಿ ಅರಣ್ಯವನ್ನು ನಿರಂತರವಾಗಿ ಅತಿಕ್ರಮಿಸುತ್ತಾ ಬರುತ್ತಿದ್ದಾರೆ. ಅತಿಕ್ರಮಣವನ್ನು ತೆರವುಗೊಳಿಸುವ ಬದಲು ಇರುವ ಅರಣ್ಯ ಪ್ರದೇಶವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ‘ಟ್ರೀ ಪಾರ್ಕ್‌’ ಸ್ಥಾಪಿಸಲು ಮುಂದಾಗಿರುವ ಕ್ರಮ ಖಂಡನಾರ್ಹ’ ಎಂದು ಸಮಿತಿಯ ಕಾರ್ಯದರ್ಶಿ ಕೆ.ಎನ್. ಉಮೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಬಿಜೆಪಿ ನೇತೃತ್ವದ ರಾಜ್ಯ ಸಕಾ೯ರವು ಬಿಡುಗಡೆ ಮಾಡಿರುವ ಬೆಂಗಳೂರು ವಿಷನ್ 2022 ರಲ್ಲಿನ ಹಸಿರು ಬೆಂಗಳೂರು ಉಪಕ್ರಮದ ಭಾಗವಾಗಿ ತುರಹಳ್ಳಿ ಅರಣ್ಯವನ್ನು ಸಂರಕ್ಷಿಸುವ ಘೋಷಣೆ ಮಾಡಿದೆ. ಆದರೆ ಟ್ರೀ ಪಾಕ್೯ ಸ್ಥಾಪಿಸಲು ಮುಂದಾಗಿರುವ ಕ್ರಮ ಅದಕ್ಕೆ ವ್ಯತಿರಿಕ್ತವಾಗಿದೆ’ ಎಂದು ಅವರು ದೂರಿದ್ದಾರೆ.

‘ಮರಗಳ ಉದ್ಯಾನ ಸ್ಥಾಪಿಸುವ ಬದಲು ಸ್ಥಳೀಯರು ಮತ್ತು ಪರಿಸರವಾದಿಗಳ ಆಕ್ಷೇಪಗಳನ್ನು ಪರಿಗಣಿಸಿ ತುರಹಳ್ಳಿ ಅರಣ್ಯವನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು