ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ: ಇಬ್ಬರು ಕಸ್ಟಮ್ಸ್ ಅಧಿಕಾರಿಗಳಿಗೆ ಶಿಕ್ಷೆ

Last Updated 9 ಡಿಸೆಂಬರ್ 2020, 21:06 IST
ಅಕ್ಷರ ಗಾತ್ರ

ಬೆಂಗಳೂರು: ಸಿಂಗಪುರದಿಂದ ತಂದಿದ್ದ 15 ಲ್ಯಾಪ್‌ಟಾಪ್‌ಗಳನ್ನು ಕಸ್ಟಮ್ಸ್ ಸುಂಕ ವಿಧಿಸದೆ ಬಿಡುಗಡೆ ಮಾಡಲು ₹45 ಸಾವಿರ ಲಂಚ ಪಡೆದಿದ್ದ ಕಸ್ಟಮ್ಸ್ ಅಧಿಕಾರಿ ಸೇರಿ ಇಬ್ಬರಿಗೆ ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ವಿ. ಶ್ರೀನಿವಾಸ ಪ್ರಸಾದ್ ಮತ್ತು ಅದೇ ಕಚೇರಿಯಲ್ಲಿ ಮುಖ್ಯ ಹವಾಲ್ದಾರ್ ಆಗಿದ್ದ ಎ. ಲೌರ್ಡುಪ್ರಭು ಶಿಕ್ಷೆಗೊಳಗಾದವರು.

ಟಿ. ಶ್ರೀಕುಮಾರ್ ಎಂಬವರು ಸಿಂಗಪುರದಿಂದ 15 ಲ್ಯಾಪ್‍ಟಾಪ್‍ಗಳನ್ನು ತಂದಿದ್ದರು. ಕಸ್ಟಮ್ಸ್ ಅಧಿಕಾರಿ
ಯಾಗಿದ್ದ ಶ್ರೀನಿವಾಸ ಪ್ರಸಾದ್, ಲಗೇಜ್ ತಪಾಸಣೆ ನಡೆಸಿ, ನಿಲ್ದಾಣದ ಆವರಣದಿಂದ ಲ್ಯಾಪ್‍ಟಾಪ್ ತೆಗೆದು
ಕೊಂಡು ಹೊರ ಹೋಗಬೇಕೆಂದರೆ ₹1.62 ಲಕ್ಷ ಕಸ್ಟಮ್ಸ್ ಸುಂಕ ಕಟ್ಟಬೇಕಾಗುತ್ತದೆ. ಹಾಗೇ ಮಾಡದಿರಲು ₹1 ಲಕ್ಷ ಹಾಗೂ 2 ಲ್ಯಾಪ್‍ಟಾಪ್‍ಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಮಾತುಕತೆ ಬಳಿಕ ₹45 ಸಾವಿರಕ್ಕೆ ಒಪ್ಪಿದ್ದರು. ಆದರೆ, ಲಂಚ ನೀಡಲು ಇಚ್ಛಿಸದ ಶ್ರೀಕುಮಾರ್, ಸಿಬಿಐಗೆ ದೂರು ನೀಡಿದ್ದರು. ಸಿಬಿಐ ಅಧಿಕಾರಿಗಳು 2015ರ ಅಕ್ಟೋಬರ್ ತಿಂಗಳಲ್ಲಿ ಇಬ್ಬರನ್ನು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT