ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪ ಸಂಗೀತೋತ್ಸವ ಜೂನ್‌ 2ರಿಂದ

Last Updated 26 ಮೇ 2022, 20:14 IST
ಅಕ್ಷರ ಗಾತ್ರ

ಬೆಂಗಳೂರು: ಉಡುಪ ಪ್ರತಿಷ್ಠಾನವು ನಗರದ ಸಂಗೀತ ರಸಿಕರನ್ನು ರಂಜಿಸಲು ಸಜ್ಜಾಗಿದೆ. 'ಉಡುಪ ಸಂಗೀತೋತ್ಸವ'ದ ನಾಲ್ಕನೇ ಆವೃತ್ತಿಯು ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಜೂನ್‌ 2ರಿಂದ 4ರವರೆಗೆ ಪ್ರತಿದಿನ ಸಂಜೆ 7ರಿಂದ ನಡೆಯಲಿದ್ದು ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಕಲಾವಿದರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.

ಟಿಕೆಟ್‌ಗಳು ಬುಕ್ ಮೈಶೋನಲ್ಲಿ ಲಭ್ಯ. ಘಟಂ ಗಿರಿಧರ್‌ 2015ರಲ್ಲಿ ಸ್ಥಾಪಿಸಿರುವ ಉಡುಪ ಪ್ರತಿಷ್ಠಾನವು ಶಾಸ್ತ್ರೀಯ ಸಂಗೀತ, ಪ್ರದರ್ಶನ ಕಲೆ ಹಾಗೂ ಸಂಸ್ಕೃತಿಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಕಾರ್ಯಕ್ರಮಗಳ ವಿವರ
ಜೂನ್‌ 2: ಮೊದಲ ಸಂಗೀತ ಕಛೇರಿ:
ವಿದ್ವಾನ್‌ ಮಟ್ಟನೂರ್‌ ಶಂಕರನ್‌ ಕುಟ್ಟಿ ಮರರ್‌ (ಚೆಂಡೆ), ಪಂಡಿತ್‌ ಯೋಗೀಶ್‌ ಸಂಸಿ (ತಬಲ), ವಿದ್ವಾನ್‌ ಬೆಂಗಳೂರು ಅಮೃತ್‌ (ಖಂಜೀರ).

ಎರಡನೇ ಸಂಗೀತ ಕಛೇರಿ: ಉಸ್ತಾದ್‌ ಅಮ್ಜದ್‌ ಅಲಿ ಖಾನ್‌ (ಸರೋದ್‌), ಪಂಡಿತ್‌ ಕುಮಾರ ಬೋಸ್‌ (ತಬಲ)

ಜೂನ್‌ 3: ವಿದುಷಿ ಬಾಂಬೆ ಜಯಶ್ರೀ (ಗಾಯನ), ವಿದುಷಿ ಜಯಂತಿ ಕುಮರೇಶ್‌ (ವೀಣೆ), ಎಚ್‌.ಎನ್‌.ಭಾಸ್ಕರ್‌ (ಪಿಟೀಲು), ವಿದ್ವಾನ್‌ ವಿ.ವಿ.ರಮಣಮೂರ್ತಿ (ಮೃದಂಗ), ವಿದ್ವಾನ್‌ ಜಯಚಂದ್ರ ರಾವ್‌ (ಮೃದಂಗ)

ಜೂನ್‌ 4: ಲೂಯಿಸ್‌ ಬ್ಯಾಂಕ್ಸ್‌ (ಕೀಬೋರ್ಡ್‌), ಶಿವಮಣಿ (ಡ್ರಮ್ಸ್‌), ಕಾರ್ತಿಕ್‌ (ಗಾಯನ), ಸ್ಟೀಫನ್‌ ದೇವಸಿ (ಕೀಬೋರ್ಡ್‌), ವಿದ್ವಾನ್‌ ರವಿಚಂದ್ರ ಕೂಳೂರು (ಕೊಳಲು), ಶೆಲ್ಡನ್ ಡಿಸಿಲ್ವ (ಬಾಸ್‌ ಗಿಟಾರ್‌) ಸಂಪರ್ಕ: 9886183872/ 7899882200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT