ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

19ರಂದು ಯುಗಾದಿ ಉತ್ಸವ

Last Updated 15 ಮಾರ್ಚ್ 2023, 5:18 IST
ಅಕ್ಷರ ಗಾತ್ರ

ಬೆಂಗಳೂರು: ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟದಿಂದ ಇದೇ 19ರಂದು ‘ಯುಗಾದಿ ಉತ್ಸವ’ ಕಾರ್ಯಕ್ರಮವನ್ನು ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಉತ್ಸವದಲ್ಲಿ ಆಹಾರ ಮೇಳ, ಕರಕುಶಲ ವಸ್ತು ಪ್ರದರ್ಶನ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಂಜೆ
6.30ಕ್ಕೆ ನಡೆಯುವ ಯುಗಾದಿ ಉತ್ಸವ ಸಮಾರಂಭದಲ್ಲಿ ನಿರ್ಮಾಪಕ
ಎಸ್.ಎ. ಚಿನ್ನೇಗೌಡ ಅವರಿಗೆ 2023ನೇ ಸಾಲಿನ ಯುಗಾದಿ ಪುರಸ್ಕಾರ ಪ್ರದಾನ ಮಾಡಲಾ
ಗುವುದು.

ಉತ್ತಮ ಸೇವೆ ಸಲ್ಲಿಸಿದ ವೈದ್ಯರಾದ ಡಾ.ಲಚಿಕ್‌ ರಾತ್‌ಮನ್, ಡಾ. ರಮೇಶ್ ಗೌಡ ಅವರನ್ನು ಸನ್ಮಾನಿಸಲಾಗುವುದು. ಸಾಹಿತಿ ಎಸ್.ಜಿ,
ಸಿದ್ಧರಾಮಯ್ಯ, ನಟಿ ತಾರಾ ಅನೂರಾಧ, ಶಾಸಕ ಕೆ.ಜೆ. ಜಾರ್ಜ್, ಸಿ.ಎಂ.ಆರ್. ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಕೆ.ಸಿ. ರಾಮಮೂರ್ತಿ, ಸವಿತಾ ರಾಮಮೂರ್ತಿ, ಲಹರಿ ವೇಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸ್ಪರ್ಧೆಗಳ ಕುರಿತಾದ ಹೆಚ್ಚಿನ ಮಾಹಿತಿಗೆ
ಸಂಪರ್ಕಿಸಿ: 9449455581.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT