ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕಡೆ ಸಮಗ್ರ ಸೇವೆಗಳ ಮಾಹಿತಿ

ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಕ್ರಮ ಕೈಗೊಳ್ಳಲು ಮೇಯರ್‌ ಸೂಚನೆ
Last Updated 16 ಜೂನ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕಸ ನಿರ್ವಹಣೆ, ಬೀದಿ ದೀಪ ನಿರ್ವಹಣೆ, ಕಂದಾಯ, ನಗರ ಯೋಜನೆ, ಕೊಳವೆ ಅಥವಾ ಕೇಬಲ್ ಅಳವಡಿಕೆಗೆ ರಸ್ತೆ ಕತ್ತರಿಸುವಿಕೆ, ಆರೋಗ್ಯ ನಿರ್ವಹಣೆ, ನೀರು ಸರಬರಾಜು ಸೇರಿದಂತೆ ವಿವಿಧ ಸೇವೆಗಳ ಸಮಗ್ರ ಮಾಹಿತಿ ಒಂದೇ ಕಡೆ ಸಿಗುವಂತೆ ಮಾಡಲು ಯೋಜನೆ ರೂಪಿಸುವಂತೆ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್‌ ಟೌನ್‌ಷಿಪ್ ಪ್ರಾಧಿಕಾರ (ಇಎಲ್‌ಸಿಐಟಿಎ) ವತಿಯಿಂದ ನಿರ್ಮಿಸಿರುವ ‘ಕಮಾಂಡ್ ಕಂಟ್ರೋಲ್ ಸೆಂಟರ್’ ಹಾಗೂ ಸ್ವಯಂಚಾಲಿತ ಕಾಂಪೋಸ್ಟಿಂಗ್ ಘಟಕಕ್ಕೆ ಸೋಮವಾರ ಭೇಟಿ ನೀಡಿ ಅವರು ಪರಿಶೀಲಿಸಿದರು.

ಇಎಲ್‌ಸಿಐಟಿಎ ನಿರ್ಮಿಸಿರುವ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಕಸ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ನೀರು ಸರಬರಾಜು, ಸಂಚಾರ ದಟ್ಟಣೆ ಮೇಲೆ ನಿಗಾ, ಸ್ಮಾರ್ಟ್ ಪಾರ್ಕಿಂಗ್ ಹಾಗೂ ಇ-ಆಡಳಿತ ಸೇವೆ ಸೇರಿದಂತೆ ವಿವಿಧ ಸೇವೆಗಳ ಮೇಲೆ ಒಂದೇ ಕಡೆ ನಿಗಾ ವಹಿಸಬಹುದಾಗಿದೆ. ಇದೇ ಮಾದರಿಯನ್ನು ಪಾಲಿಕೆಯಲ್ಲೂ ಅಳವಡಿಸಿಕೊಳ್ಳುವಂತೆ ಮೇಯರ್‌ ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ ವತಿಯಿಂದ ಕಮಾಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಾವಯವ ಕಸ–ಒಂದೇ ದಿನದಲ್ಲಿ ಗೊಬ್ಬರ

ಕಸ ಸಂಸ್ಕರಣಾ ಘಟಕಗಳಲ್ಲಿ ಗೊಬ್ಬರವನ್ನಾಗಿ ಪರಿವರ್ತನೆ ಮಾಡಲು ಸಾಮಾನ್ಯವಾಗಿ ಒಂದು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ, ಇಎಲ್‌ಸಿಐಟಿಎ ಅಭಿವೃದ್ಧಿಪಡಿಸಿರುವ ಸ್ವಯಂಚಾಲಿತ ಕಂಪೋಸ್ಟಿಂಗ್ ಘಟಕವು ಸಾವಯವ ಕಸವನ್ನು 24 ಗಂಟೆಗಳಲ್ಲಿ ಗೊಬ್ಬರವಾಗಿ ಪರಿವರ್ತಿಸಲಿದೆ.

ಒಮ್ಮೆಗೆ 50 ಕೆ.ಜಿ, 100 ಕೆ.ಜಿ, 500 ಕೆ.ಜಿ, 1 ಟನ್, 5 ಟನ್‌ಗಳಷ್ಟು ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಸಾಮರ್ಥ್ಯದ ಘಟಕಗಳನ್ನು ಪ್ರಾಧಿಕಾರವು ತಯಾರಿಸಿದೆ. ಈ ಘಟಕಗಳಲ್ಲಿ ಶಾಖ ಆಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಕಸವು ತ್ವರಿತಗತಿಯಲ್ಲಿ ಗೊಬ್ಬರವಾಗಿ ಪರಿವರ್ತನೆ ಆಗುವಂತೆ ಮಾಡಲು ಈ ತಂತ್ರಜ್ಞಾನ ನೆರವಾಗುತ್ತದೆ.

ಇಎಲ್‌ಸಿಐಟಿಎ ವತಿಯಿಂದ ನೂತನವಾಗಿ ನಿರ್ಮಿಸಿರುವ ಸ್ವಯಂಚಾಲಿತ ಕಂಪೋಸ್ಟಿಂಗ್ ಘಟಕಗಳನ್ನು ಮೇಯರ್‌ ಪರಿಶೀಲಿಸಿದರು. ವಾರ್ಡ್ ಮಟ್ಟದಲ್ಲಿ ಹೆಚ್ಚು ಸಾವಯವ ತ್ಯಾಜ್ಯ ಉತ್ಪತ್ತಿ ಆಗುವ ಕಡೆ ಈ ಘಟಕಗಳನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಮೇಯರ್‌ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT