ಬೆಂಗಳೂರು: ಕೇಂಬ್ರಿಡ್ಜ್ ತಾಂತ್ರಿಕ ಸಂಸ್ಥೆ ವತಿಯಿಂದ ಇದೇ 16 ಮತ್ತು 17 ರಂದು ಕಾಲೇಜಿನ ಪ್ರಾಂಗಣದಲ್ಲಿ ‘ಸಿಐ ಟೆಕ್ ಮುಕ್ತ ತಂತ್ರಜ್ಞಾನ ದಿನಾಚರಣೆ’ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಸಿದ್ಧಪಡಿಸಿರುವ ವೈಜ್ಞಾನಿಕ ಮಾದರಿಗಳ ಪ್ರದರ್ಶನವೂ ನಡೆಯಲಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಡಾ.ಡಿ.ಎಚ್. ರಾವ್, ‘ನೈಸರ್ಗಿಕ ಸಂಪನ್ಮೂಲಗಳನ್ನು ಸದುಪಯೋಗ ಪಡಿಸಿಕೊಳ್ಳುವ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು 750ಕ್ಕೂ ಹೆಚ್ಚು ಮಾದರಿಗಳನ್ನು ರೂಪಿಸಿದ್ದಾರೆ. 150 ಉತ್ತಮ ಮಾದರಿಗಳನ್ನು ಆಯ್ಕೆ ಮಾಡುತ್ತೇವೆ. ಅದರಲ್ಲಿ ‘ಉತ್ತಮ ಆವಿಷ್ಕಾರ’, ‘ಉತ್ತಮ ವಿನ್ಯಾಸ’ ಹಾಗೂ ‘ಸಾಮಾಜಿಕ ಕಳಕಳಿ ಹೊಂದಿರುವ ಉತ್ತಮ ಮಾದರಿ’ ವಿಭಾಗಗಳಲ್ಲಿ ಬಹುಮಾನ ನೀಡಲಿದ್ದೇವೆ’ ಎಂದರು.

‘ರಾಜ್ಯ ಆವಿಷ್ಕಾರ ಮಂಡಳಿ ಅಧ್ಯಕ್ಷ ಡಾ.ಎಚ್.ಪಿ ಖಿಂಚ ಹಾಗೂ ಸಮಾರೋಪದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರೀ ಗೌಡ ಭಾಗವಹಿಸಿಲಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.