ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಸ್ತ್ರ’ದಲ್ಲಿ ವಿಶ್ವವಿದ್ಯಾಲಯ ದಿನ

Published 29 ಏಪ್ರಿಲ್ 2024, 19:43 IST
Last Updated 29 ಏಪ್ರಿಲ್ 2024, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯೋಗ ಕ್ಷೇತ್ರದಲ್ಲಿ ನಿರಂತರವಾಗಿ ಬದಲಾಗುತ್ತಿರುವ ಅಗತ್ಯಕ್ಕೆ ತಕ್ಕಂತೆ ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು’ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ
(ಎಐಸಿಟಿಇ) ಉಪಾಧ್ಯಕ್ಷ ಡಾ. ಅಭಯರ್‌ ಜೆರೆ ತಿಳಿಸಿದರು.

ಸಸ್ತ್ರ (ಎಸ್‌ಎಎಸ್‌ಟಿಆರ್‌ಎ) ಯೂನಿವರ್ಸಿಟಿಯ ‘ವಿಶ್ವವಿದ್ಯಾಲಯದ ದಿನ’ದಲ್ಲಿ ಮಾತನಾಡಿದ ಅವರು, ‘ವಿಕಸಿತವಾಗುತ್ತಿರುವ ಅನಿಶ್ಚಿತ ತಂತ್ರಜ್ಞಾನಗಳನ್ನು ಸತತವಾಗಿ ಕಲಿಯುವ ಪದವೀಧರರು, ಇದರ ಜೊತೆಗೆ ದೀರ್ಘಕಾಲದಲ್ಲಿ ಜೀವನೋಪಾಯಕ್ಕಾಗಿ ಅಗತ್ಯವಿರುವ ಸ್ವಯಂ– ಸ್ಥಿರತೆಯನ್ನೂ
ಸೃಷ್ಟಿಸಿಕೊಳ್ಳಬೇಕು’ ಎಂದರು.

ಶಿಸ್ತು ಸೇರಿದಂತೆ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಹಾಗೂ ಶಿಕ್ಷಕ ವರ್ಗ– ಪಿಎಚ್‌.ಡಿ ಪದವಿ ಪೂರೈಸಿ
ದವರಿಗೆ ಸಂಶೋಧನಾ ಪ್ರಶಸ್ತಿಗಳನ್ನು ಪ್ರದಾನಮಾಡಲಾಯಿತು.

2023–24ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದ ಕುಲಪತಿ ಡಾ. ಎಸ್‌. ವೈದ್ಯಸುಬ್ರಹ್ಮಣ್ಯಂ, ವಿಶ್ವವಿದ್ಯಾಲಯದ ಪ್ರಗತಿಯ ಪ್ರಮುಖಾಂಶಗಳನ್ನು ವಿವರಿಸಿದರು. 1100 ಪ್ರಕಟಣೆಗಳು, 12 ಪೇಟೆಂಟ್‌, 8 ಉತ್ಪನ್ನಗಳ ಬಿಡುಗಡೆ, ವಿದ್ಯಾರ್ಥಿಗಳಿಗೆ 1900 ಉದ್ಯೋಗ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ₹125 ಕೋಟಿ ವಿನಿಯೋಗದ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT