ಬೆಂಗಳೂರು: ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದಲ್ಲಿ(ಯುವಿಸಿಇ) ಪದವಿಯಲ್ಲಿ ಓದುತ್ತಿರುವ ಶೇಕಡ 86.14ರಷ್ಟು ವಿದ್ಯಾರ್ಥಿಗಳಿಗೆ ‘ಕ್ಯಾಂಪಸ್ ಆಯ್ಕೆ’ ಮೂಲಕ ಉದ್ಯೋಗ ಲಭ್ಯವಾಗಿದೆ.

2025ನೇ ಸಾಲಿನಲ್ಲಿ 776 ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಲಭ್ಯವಾಗಿದೆ. ಹಿಂದಿನ ಶೈಕ್ಷಣಿಕ ಸಾಲಿಗೆ ಹೋಲಿಸಿದರೆ ಈ ಬಾರಿ ಶೇ 23.25 ರಷ್ಟು ಉದ್ಯೋಗಾವಕಾಶ ಹೆಚ್ಚಳವಾಗಿದೆ ಎಂದು ಯುವಿಸಿಯ ತರಬೇತಿ ಮತ್ತು ಉದ್ಯೋಗ ಅಧಿಕಾರಿ ಪ್ರೊ.ಎಸ್.ಎಂ.ದಿಲೀಪ್ ಕುಮಾರ್ ತಿಳಿಸಿದ್ದಾರೆ.

ಒಟ್ಟು 462 ಸಂಸ್ಥೆಗಳು ಕ್ಯಾಂಪಸ್ ಆಯ್ಕೆಯಲ್ಲಿ ಭಾಗವಹಿಸಿದ್ದು, 254 ಸಂಸ್ಥೆಗಳು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಿವೆ.

ಯಾವ ವಿಭಾಗ, ಎಷ್ಟು ಪ್ಯಾಕೇಜ್?: ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ(ಎಐಎಂಎಲ್, ಸಿಎಸ್ಇ, ಐಎಸ್ಇ) ವಾರ್ಷಿಕ ₹9.75 ಲಕ್ಷ, ಕೋರ್ ವಿಭಾಗದಲ್ಲಿ (ಎಲೆಕ್ಟ್ರಿಕಲ್, ವಿದ್ಯುನ್ಮಾನ ಮತ್ತು ಸಂವಹನ) ವಾರ್ಷಿಕ ₹7.77 ಲಕ್ಷ, ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ವಾರ್ಷಿಕ ₹5.28 ಲಕ್ಷ ಹಾಗೂ ಸಿವಿಲ್ ಎಂಜಿನಿಯರಿಂಗ್ ವಿಭಾಗದವರಿಗೆ ವಾರ್ಷಿಕ ₹4.62 ಲಕ್ಷ ನಿಗದಿಯಾಗಿದೆ. ಅತಿ ಹೆಚ್ಚು ಪ್ಯಾಕೇಜ್ ವಾರ್ಷಿಕ 28.5 ಲಕ್ಷವಾಗಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾಗಿದೆ. 2024ರಲ್ಲಿ 527 ವಿದ್ಯಾರ್ಥಿಗಳಿದ್ದರು. 2025ರಲ್ಲಿ 783 ವಿದ್ಯಾರ್ಥಿಗಳಿಗೆ ಏರಿಕೆಯಾಗಿದೆ. ಯುವಿಸಿಇ ಉದ್ಯೋಗ ಕಚೇರಿಯಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ 486 ರಿಂದ 744ಕ್ಕೆ ಏರಿದೆ.

ಪ್ರಮುಖ ಉದ್ಯೋಗದಾತ ಸಂಸ್ಥೆಗಳು: ಒರಾಕಲ್, ಜೀಸ್ಕೇಲಾರ್, ಎಸ್ಎಪಿ ಲ್ಯಾಬ್ಸ್, ಡಾಯ್ಚೆ ಬ್ಯಾಂಕ್, ಲಂಡನ್ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್, ಥಾಲೆಸ್, ಅಪ್ಲೈಡ್ ಮೆಟೀರಿಯಲ್ಸ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಜುನಿಪರ್ ನೆಟ್ವರ್ಕ್ಸ್, ಡೆಲ್ಟಾ ಎಲೆಕ್ಟ್ರಾನಿಕ್ಸ್, ಡಾರ್, ರಾಬರ್ಟ್ ಬಾಷ್, ಟೊಯೊಟಾ ಕಿರ್ಲೋಸ್ಕರ್ ಮೋಟಾರ್, ಕೋಕ್ ಇಂಡಸ್ಟ್ರೀಸ್, ಫ್ಲೋಸರ್ವ್, ಫಿಲಿಪ್ಸ್, ಎಕ್ಸ್ಟ್ರೀಮ್ ನೆಟ್ವರ್ಕ್ಸ್ ಮತ್ತು ಹ್ಯಾವೆಲ್ಸ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.